ಅಂತರಾಷ್ಟ್ರೀಯ ಸುದ್ದಿ

ಉತ್ಖನನದಲ್ಲಿ ಚಿತಾಭಸ್ಮದಿಂದ ಶ್ರೀಮಂತನ ಮತ್ತು ಅವನ ಪುರುಷ ಗುಲಾಮನ ಅಸ್ತಿಪಂಜರದ ಜೊತೆ ಸಿಕ್ಕಿದ್ದೇನು ಗೊತ್ತಾ.

ಸುಮಾರು 2,000 ವರ್ಷಗಳ ಹಿಂದೆ ಪ್ರಾಚೀನ ರೋಮನ್ ನಗರವಾದ ಪೊಂಪೈಯನ್ನು ಜ್ವಾಲಾಮುಖಿ ಸ್ಫೋ’ಟವು ನಾ’ಶಪಡಿಸಿತ್ತು. ಆಗ ಮೃತಪಟ್ಟ ಇಬ್ಬರು ಪುರುಷರ ಅವಶೇಷಗಳನ್ನು ಪುರಾತತ್ತ್ವಜ್ಞರು ಪತ್ತೆ ಮಾಡಿದ್ದಾರೆ. ಒಬ್ಬರು ಬಹುಶಃ ಉನ್ನತ ಸ್ಥಾನಮಾನದ ವ್ಯಕ್ತಿ, ಮತ್ತು ಇನ್ನೊಬ್ಬರು ಅವರ ಗುಲಾಮರು ಎಂದು ಪೊಂಪೈ ಪುರಾತತ್ವ ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.

ಅವರು ಸ್ಫೋ’ಟಗೊಂಡಾಗ “ಬಹುಶಃ ಅವರು ಜ್ವಾಲಾಮುಖಿಯಿಂದ ತಮ್ಮನ್ನು ತಾವು ರಕ್ಷಿಸಲು ಬಹಳ ಯಾತನೆ ಪಡೆಯುತ್ತಿದ್ದರು” ಎಂದು ನಿರ್ದೇಶಕ ಮಾಸ್ಸಿಮೊ ಒಸನ್ನಾ ಹೇಳಿದರು. ಕ್ರಿ.ಶ 79 ರಲ್ಲಿ ವೆಸುವಿಯಸ್ ಪರ್ವತದಿಂದ ಜ್ವಾಲಾಮುಖಿ ಸ್ಫೋಟದಿಂದ ಪೊಂಪೈ ಮುಳುಗಿತು.

ಸ್ಫೋ’ಟವು ಪೊಂಪೈಯನ್ನು ಬೂದಿಯಲ್ಲಿ ಹೂತುಹಾಕಿತು, ನಗರ ಮತ್ತು ಅದರ ನಿವಾಸಿಗಳನ್ನು ಈ ಜ್ವಾಲಾಮುಖಿ ನುಂಗಿ ಹಾಕಿತ್ತು. ಇದರ ಕಾರಣದಿಂದಾಗಿ ಪುರಾತತ್ತ್ವಜ್ಞರಿಗೆ ಈ ಜಾಗವು ಶ್ರೀಮಂತ ಮೂಲವಾಗಿದೆ. ಈ ತಿಂಗಳು ಇದರ ಬಗ್ಗೆ ಆವಿಷ್ಕಾರವನ್ನು ಮಾಡಲಾಗಿದೆ. ಪ್ರಾಚೀನ ನಗರದ ಹೊರವಲಯದಲ್ಲಿರುವ ದೊಡ್ಡ ವಿಲ್ಲಾವನ್ನು ಉತ್ಖನನ ಮಾಡುವಾಗ ಈ ಬಗ್ಗೆ ಮಾಹಿತಿ ದೊರಕಿದೆ.

ಶ್ರೀಮಂತ ವ್ಯಕ್ತಿಯು 30 ರಿಂದ 40 ವರ್ಷ ವಯಸ್ಸಿನವನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಕುತ್ತಿಗೆಯ ಭಾಗದಲ್ಲಿ ಬೆಚ್ಚಗಿನ ಉಣ್ಣೆಯ ಮೇಲಂಗಿಯ ಕುರುಹುಗಳು ಕಂಡುಬಂದಿವೆ. ಇನ್ನೊಬ್ಬ ವ್ಯಕ್ತಿ 18 ರಿಂದ 23 ವರ್ಷ ವಯಸ್ಸಿನವರು. ಪುರಾತತ್ವ ಸಂಶೋಧನಾ ಇಲಾಖೆಯ ಅಧಿಕಾರಿಗಳು ಈ ದೇಹದ ಬೆನ್ನು ಮೂಳೆಗಳನ್ನು ಪರಿಶೀಲಿಸಿ ಅದು ಸವೆದಿರುವ ಕಾರಣ ಈ ದೇಹವು ಯಾವುದೊ ಕಾರ್ಮಿಕನದು ಎಂದು ತಿಳಿಸಿದ್ದಾರೆ.

“ಇದು ಉಷ್ಣ ಆ’ಘಾತದಿಂದ ಸಾವನ್ನಪ್ಪಿದ ದೇಹಗಳು, ಅವರ ಕಾಲು ಮತ್ತು ಕೈಗಳಿಂದ ಕೂಡ ಇದನ್ನು ಸ್ಪಷ್ಟವಾಗಿ ತಿಳಿಯಬಹುದು” ಎಂದು ಒಸನ್ನಾ ರವರು ಸುದ್ದಿಗಾರರಿಗೆ ತಿಳಿಸಿದರು. ಈ ಸ್ಫೋ’ಟ ಸಂಭವಿಸಿದಾಗ ಬೆಳಿಗ್ಗೆ ಅಂದಿನ ಬೆಳಗ್ಗೆ ಈ ದು’ರ್ಘಟನೆ ನಡೆದಿದೆ. ಇದು ಒಂದು ನಂಬಲಾಗದ ಮತ್ತು ಅಸಾಧಾರಣ ಸಾಕ್ಷ್ಯ ಎಂದು ಅವರು ಬಣ್ಣಿಸಿದರು.

ನೇಪಲ್ಸ್ ಬಳಿ ಇರುವ ಪುರಾತತ್ತ್ವ ಶಾಸ್ತ್ರದ ಸ್ಥಳದಲ್ಲಿ ಉತ್ಖನನ ಕಾರ್ಯ ಮುಂದುವರೆದಿದೆ. ಆದರೆ ಕರೋನವೈರಸ್ ಕಾರಣದಿಂದಾಗಿ ಇದು ಪ್ರವಾಸಿಗರಿಗೆ ಸದ್ಯದ ಸ್ಥಿತಿಯಲ್ಲಿ ಮುಚ್ಚಲ್ಪಟ್ಟಿದೆ.

Leave a Reply

Your email address will not be published. Required fields are marked *