ಈಗಷ್ಟೇ ಬಿಗ್ ಬಾಸ್ ಬಗ್ಗೆ ಹೊರಬಿತ್ತು ಮಹತ್ತರ ಮಾಹಿತಿ. ಪರಮೇಶ್ವರ್ ಗುಂಡ್ಕಲ್ ಅವರು ಹೇಳಿದ್ದೇನು ಗೊತ್ತಾ.
ಕಿರುತೆರೆಯ ಅತ್ಯಂತ ಹಿರಿಯ ಹಾಗೂ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಬಗ್ಗೆ ಈಗ ಮತ್ತೊಂದು ಮಹತ್ತರ ಸುದ್ದಿ ಆಚೆ ಬಿದ್ದಿದೆ. ಸುದ್ದಿ ಏನು ಅಂತ ನಿಮಗೆ ಇಂದು ನಾವು ತಿಳಿಸಿಕೊಡುತ್ತೇವೆ ಸಂಪೂರ್ಣ ಸುದ್ದಿಯನ್ನು ಓದಿ.
ಈಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಬಿಗ್ ಬಾಸ್ ಎಂಟನೆಯ ಆವೃತ್ತಿಯು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗಾಗಲೇ ಬಾಲಿವುಡ್ ಹಾಗೂ ಟಾಲಿವುಡ್ ಚಿತ್ರಗಳ ಡಬ್ಬಿಂಗ್ ವರ್ಷನ್ ಕೂಡ ಕಲರ್ಸ್ ನಲ್ಲಿ ತೆರೆಕಾಣುತ್ತಿದೆ. ಇತ್ತೀಚೆಗೆ ಬಂದ ಬಾಹುಬಲಿ ಚಿತ್ರವು ಕೂಡ ಒಳ್ಳೆಯ ಟಿಆರ್ಪಿ ಅನ್ನು ಪಡೆದಿತ್ತು.
ಈ ಬಾರಿಯೂ ಇನ್ನೋವೆಟಿವ್ ಫಿಲಂ ಸಿಟಿಯಲ್ಲಿ ಅದ್ದೂರಿ ಸೆಟ್ ತಯಾರಾಗುತ್ತಿದ್ದು. ಬಿಗ್ ಬಾಸ್ ಡಿಸೆಂಬರ್ ಅಥವಾ ಜನವರಿಯಲ್ಲಿ ಪ್ರಸಾರವಾಗುವುದು ಬಹುತೇಕ ಖಚಿತ ಎಂದು ಬಲ್ಲ ಮೂಲಗಳು ತಿಳಿಸಿವೆ. ಇನ್ನು ಇದೇ ವಿಚಾರವಾಗಿ ಇಂದು ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಹಾಗೂ ಕರ್ನಾಟಕದ ನಮ್ಮೆಲ್ಲರ ಪ್ರೀತಿಯ ಕಿಚ್ಚ ಸುದೀಪ್ ಇಬ್ಬರು ಕುಳಿತು ಬಹಳವಾಗಿ ಚರ್ಚೆ ನಡೆಸಿದ್ದಾರೆ.
ಎಂದಿನಂತೆಯೇ ಈ ಬಾರಿಯೂ 15 ರಿಂದ 20 ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಯ ಒಳಗೆ ಹೋಗಲಿದ್ದು ಅವರು ಯಾರೆಂಬ ಕಾತರತೆ ಹೆಚ್ಚಾಗಿದೆ. ಅಷ್ಟೇ ಅಲ್ಲದೆ ಈ ಬಾರಿ ಬಿಗ್ ಬಾಸ್ ಮನೆ ಒಳಗಡೆ ಮತ್ತಷ್ಟು ಹೆಚ್ಚು ವಿಶೇಷತೆಗಳು ಇರಲಿದ್ದು, ಸುದೀಪ್ ಅವರೊಂದಿಗೂ ಸಹ ವಿಶೇಷ ಸಂಚಿಕೆಗಳನ್ನು ಆಯೋಜಿಸುವ ಚಿಂತನೆಯು ಕೂಡ ನಡೆದಿದೆ.
ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವ ಕಲರ್ಸ್ ಕನ್ನಡದ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಅವರು ಇಂದು ಬಿಗ್ ಬಾಸ್ ಸೀಸನ್ ಎಂಟರ ವಿಚಾರವಾಗಿ ನಾನು ಹಾಗೂ ಸುದೀಪ್ ಅವರು ಚರ್ಚೆ ಮಾಡಿದ್ದೇವೆ ಎಂದು ತಮ್ಮ ಅಫಿಶಿಯಲ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಎಲ್ಲಾ ಬಿಗ್ ಬಾಸ್ ಪ್ರೇಕ್ಷಕರಿಗೆ ಹಾಗು ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಇದು ಒಂದು ಸಿಹಿ ಸುದ್ದಿ ಎಂದು ಹೇಳಬಹುದು.
ಎಲ್ಲಾ ಕಿಚ್ಚ ಸುದೀಪ ರವರ ಅಭಿಮಾನಿಗಳು ಇದನ್ನು ಶೇರ್ ಮಾಡಿ. ಮತ್ತಷ್ಟು ಉಪ್ಡೇಟ್ಸ್ ಗಳನ್ನು ಪ್ರತಿದಿನ ನಮ್ಮ ಪೇಜ್ ನಲ್ಲಿ ಪಡೆಯಿರಿ.