ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ ಖ್ಯಾತ ನಟ ಜಗ್ಗೇಶ್ ಅವರ ಪತ್ನಿ ಪರಿಮಳ. ಏನೆಂದು ಓದಲು ಕ್ಲಿಕ್ ಮಾಡಿ.
ಕರ್ನಾಟಕದ ಪ್ರಖ್ಯಾತ ಹಾಸ್ಯನಟ ಜಗ್ಗೇಶ್ ಅವರ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ಗುರುರಾಘವೇಂದ್ರರ ಪರಮಭಕ್ತರಾದ ಜಗ್ಗೇಶ್ ಅವರು ಸದಾ ನಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಯರ ಬಗ್ಗೆ ಹಲವಾರು ಅಂಶಗಳನ್ನು ಹಾಗೂ ಅತ್ಯುತ್ತಮ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅಂತೆಯೇ ರಾಯರ ಅನುಗ್ರಹದಿಂದ ಇಂದು ಜಗ್ಗೇಶ್ ಹಾಗೂ ತಮ್ಮ ಪತ್ನಿ ಪರಿಮಳಾ ಜಗ್ಗೇಶ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ.
ನಟ ಜಗ್ಗೇಶ್ ಅವರು ಮಾರ್ಚ್ 17 1963 ರಂದು ಕರ್ನಾಟಕದ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಹುಟ್ಟಿದರು. ಇವರಿಗೆ ನವರಸ ನಾಯಕ ಎಂಬ ಬಿರುದು ಕೂಡ ಇದೆ. 1978 ರಿಂದ ಈಗಿನವರೆಗೂ ಕೂಡ ನಟನೆಯಲ್ಲಿ ಸಕ್ರಿಯರಾಗಿರುವವರು, ಈಗ ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಆದಂತಹ ಕಾಮಿಡಿ ಕಿಲಾಡಿಗಳು ನಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಭಾರತೀಯ ಜನತಾ ಪಾರ್ಟಿ ಯನ್ನು ಕೂಡ ಸೇರಿದ್ದ ಜಗ್ಗೇಶ್ ರವರು ನಂತರ, ಹಲವಾರು ಏಳು ಬೀಳುಗಳನ್ನು ಎದುರಿಸಿ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಸತತವಾಗಿ ಅತ್ಯುತ್ತಮ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ನಟ ಜಗ್ಗೇಶ್ ರವರು ತಮ್ಮ ಸಹೋದರನಾದ ಕೋಮಲ್ ಅವರನ್ನು ಕೂಡ ಚಿತ್ರರಂಗಕ್ಕೆ ತಂದರು.
ಇಷ್ಟೆಲ್ಲ ಸಾಧನೆಗಳನ್ನು ಮಾಡಿರುವ ಕರ್ನಾಟಕದ ಖ್ಯಾತ ನಟ ಜಗ್ಗೇಶ್ ಅವರು ಇಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವರ ಪತ್ನಿ ಪರಿಮಳಾ ಜಗ್ಗೇಶ್ ರವರು ಒಂದು ವಿಶೇಷ ವಿಚಾರವನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ನಟ ಜಗ್ಗೇಶ್ ಅವರು ಇಂದಿಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಲವತ್ತು ವರ್ಷಗಳಾಗಿವೆ.
ಈ ವಿಚಾರವಾಗಿ ನಾವು ಇಂದು ಮನೆಯಲ್ಲಿ ಸಂಭ್ರಮದ ವಾತಾವರಣದಲ್ಲಿ ಇದ್ದೇವೆ. ಹಾಗೂ ಇದನ್ನು ಪ್ರೆಸ್ ಮೀಟ್ ಮೂಲಕ ಪ್ರತಿಯೊಬ್ಬರಿಗೂ ತಿಳಿಸಲಿದ್ದೇವೆ ಎಂದು ಪರಿಮಳ ಜಗ್ಗೇಶ್ ರವರು ತಮ್ಮ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಕಂಡ ಕರುನಾಡ ಜನ ಬಹಳ ಹರ್ಷಿತರಾಗಿದ್ದಾರೆ.