ಅಂಬರೀಶ್ ಅವರ ಬಗ್ಗೆ ಡಿ ಬಾಸ್ ಮನದಾಳದ ಮಾತುಗಳನ್ನು ಆಡಿದ್ದಾರೆ. ಕಣ್ಣಂಚಲ್ಲಿ ನೀರು ಬರುವುದು ಖಚಿತ.
ಡಿ ಬಾಸ್ ದಿವಂಗತ ಅಂಬರೀಶ್ ಅವರ ಬಗ್ಗೆ ಇಂದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅವರ ಗುಡಿಯ ಉದ್ಘಾಟನೆಯ ನಂತರ ದರ್ಶನ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಬಹಳ ಭಾವುಕರಾಗಿ ಮಾತನಾಡಿರುವ ಡಿ ಬಾಸ್ ಮಾತುಗಳು ಜನರ ಮನಸ್ಸಿನಲ್ಲಿ ನಾಟುತ್ತಿವೆ. ಅಂಬರೀಶ್ ಅವರು ಈಗಲೂ ನಿಮ್ಮ ಮನಸ್ಸಿನಲ್ಲಿ ಕಾಡುತ್ತಾರೆ ಎಂದಾಗ ಅವರು 24 ಗಂಟೆಯೂ ಸಹ ನಮ್ಮ ಮನದಲ್ಲಿಯೇ ಇರುತ್ತಾರೆ ಎಂದು ಹೇಳಿದ್ದಾರೆ.
ನಾನು ಪ್ರತಿ ಬಾರಿ ಬಂದಾಗಲೂ ಒಮ್ಮೆ ಈ ಜಾಗಕ್ಕೆ ಭೇಟಿ ನೀಡುತ್ತೇನೆ. ಇದು ನನ್ನ ಪಾಲಿಗೆ ದೇವಸ್ಥಾನವಿದ್ದಂತೆ ಎಂದು ಹೇಳಿದ್ದಾರೆ. ಅಂಬರೀಶ್ ಅವರಿಗೆ ಈಗ ಗುಡಿಯನ್ನು ಕಟ್ಟಿದ್ದಾರೆ ಇದನ್ನು ನೋಡಿದರೆ ನಿಮಗೆ ಏನನ್ನಿಸುತ್ತದೆ ಎಂದು ಕೇಳಿದಾಗ, ಹೌದು ಗುಡಿಯನ್ನು ಕಟ್ಟುವುದರಲ್ಲಿ ತಪ್ಪಿಲ್ಲ.
ಏಕೆಂದರೆ ಆ ಮನುಷ್ಯ ಇರುವುದು ಹಾಗೆಯೇ. ಅವರನ್ನು ಜನರು ದೇವಸ್ಥಾನದಲ್ಲಿ ನೋಡಲು ಬಯಸುತ್ತಾರೆ ಎಂದರೆ ಅದರಲ್ಲಿ ತಪ್ಪೇನಿಲ್ಲ. ನಾನಂತೂ ಅವರನ್ನು ದೇವರ ತರಹವೇ ಪೂಜಿಸುತ್ತೇನೆ ಎಂದು ಹೇಳಿದ್ದಾರೆ. ಅಂಬರೀಶ್ ಅವರ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಅತಿ ಹೆಚ್ಚು ನೆನಪಲ್ಲಿ ಉಳಿಯುವ ಹಾಗೂ ಕಾಡುವ ವಿಚಾರ ಯಾವುದು ಎಂದು ಕೇಳಿದಾಗ, ಗುರು ನಮಗೆ ಬೈಯುತ್ತಿದ್ದರು ಅದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.
ಅವರೊಬ್ಬರಾದರೂ ನಮಗೆ ತಂದೆಯ ಸ್ಥಾನದಲ್ಲಿ ನಿಂತುಕೊಂಡು ಬುದ್ಧಿ ಹೇಳುತ್ತಿದ್ದರು. ಈಗ ಅಂಬರೀಶ್ ಅವರನ್ನು ನಾನು ಬಹಳವಾಗಿಯೇ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅವರು ಇದ್ದಾಗ ನೀವೆಲ್ಲರೂ ಅವರು ಹೇಗಿರುತ್ತಿದ್ದರು ಎಂದು ನೋಡಿದ್ದೀರಿ. ಪರಿಸ್ಥಿತಿಗಳು ಕೂಡ ಎಲ್ಲರಿಗೂ ತಿಳಿಯುತ್ತವೆ.
ಆದರೆ ನಮ್ಮನ್ನು ಕರೆಯುವುದಕ್ಕೆ, ತಿದ್ದುವುದ್ದಕ್ಕೆ,ಬೈದು ಬುದ್ದಿ ಹೇಳುವುದಕ್ಕೆ ಈಗ ಧ್ವನಿಯೇ ಇಲ್ಲ ಎಂದು ಕನ್ನೇರಿಟ್ಟಿದ್ದರೆ. ಇಲ್ಲಿಗೆ ಬಂದಾಗ ಏನನಿಸುತ್ತದೆ ಎಂದು ಕೇಳಿದಾಗ ನಾನು ಆ ಕಹಿ ಘಟನೆಯನ್ನು ನೆನಸಿಕೊಳ್ಳಲು ಬಹಳ ಕಷ್ಟ. ಆದರೆ ದೇವಸ್ಥಾನಕ್ಕೆ ಬಂದಿದ್ದೇನೆ ದೇವರನ್ನು ನೋಡಿಕೊಂಡು ಹೊರಡುತ್ತೇನೆ ಎಂದು ಹೇಳಿದ್ದಾರೆ.