Featuredಸಿನಿಮಾ ಮಾಹಿತಿ

ನಾಗಿಣಿ 2 ಧಾರಾವಾಹಿಯ ನಾಯಕನಟನ ಬದಲಾವಣೆ. ದಿಢೀರ್ ಬೆಳವಣಿಗೆಗೆ ಕಾರಣವೇನು ಗೊತ್ತಾ.

ಕನ್ನಡದ ಖ್ಯಾತ ದಾರವಾಹಿ ನಾಗಿಣಿ 2 ಮುಖ್ಯಪಾತ್ರದ ಬದಲಾವಣೆಯಾಗಿದೆ. ಹೌದು, ದಿಢೀರನೆ ಮುಖ್ಯ ಪಾತ್ರಧಾರಿಯಾಗಿದ್ದ ಪ್ರಣವ್ ಅಲಿಯಾಸ್ ತ್ರಿವಿಕ್ರಮ್ ಇದ್ದಕ್ಕಿದ್ದ ಹಾಗೆ ವಾಹಿನಿಯನ್ನು ತೊರೆದು ಧಾರಾವಾಹಿಯನ್ನು ತ್ಯಜಿಸಿದ್ದಾರೆ. ಅಸಲಿ ಕಾರಣವೇನು ಎಂಬುದು ಇಲ್ಲಿದೆ ತಪ್ಪದೇ ಓದಿ.

ಮೊದಮೊದಲು ಖ್ಯಾತ ನಟಿ ನಮ್ರತಾ ಗೌಡ, ಹಾಗೂ ಹೊಸ ಪ್ರತಿಭೆ ನಿನಾದ್ ಹರಿತ್ಸ, ಪ್ರಣವ್ ಅವರನ್ನು ಹಾಕಿಕೊಂಡು ಧಾರವಾಹಿಯನ್ನು ಅದ್ದೂರಿಯಾಗಿ ಶೂಟಿಂಗ್ ಪ್ರಾರಂಭ ಮಾಡುವುದಕ್ಕೆ ಚಾಲನೆ ಪಡೆದುಕೊಂಡರು. ಖ್ಯಾತ ನಾಯಕ ನಟ ಮೋಹನ್ ಅವರು ಕೂಡ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಗ್ಗಜರು ಇದ್ದ ಈ ದಾರವಾಹಿಯಲ್ಲಿ ದಿಢೀರನೆ ಈ ಬದಲಾವಣೆಯು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಪುಟ್ಟಗೌರಿ ಮದುವೆ ಸೇರಿದಂತೆ ಇನ್ನೂ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ನಮ್ರತಾ ಗೌಡ ಈ ಧಾರಾವಾಹಿಗೆ ನಾಯಕ ನಟಿಯಾಗಿ ಆಯ್ಕೆಯಾದರು. ಹಾಗೆ ಸ್ಟಾರ್ ಸುವರ್ಣ ವಾಹಿನಿಯ ಬಿಳಿ ಹೆಂಡ್ತಿ ಹಾಗೂ ಉದಯ ವಾಹಿನಿಯ ಅರಮನೆ ಧಾರವಾಹಿಗಳಲ್ಲಿ ಎಲೆಮರೆ ಕಾಯಿಯಂತೆ ನಟಿಸಿದ್ದ ಬಹುಮುಖ ಪ್ರತಿಭೆ ನಿನಾದ್ ಅವರ ನಟನೆಯೂ ಕೂಡ ಈ ಧಾರಾವಾಹಿಯಲ್ಲಿ ಎಲ್ಲರ ಮನಸ್ಸನ್ನು ಸೂರೆಗೊಳಿಸುವಲ್ಲಿ ಶ್ಲಾಘನೀಯವಾಗಿತ್ತು.

ಆದರೆ ನಾಯಕನಟ ತ್ರಿವಿಕ್ರಮನ ಪಾತ್ರದಲ್ಲಿ ಇತ್ತೀಚೆಗೆ ಕಂಡ ಬದಲಾವಣೆ ಹಾಗೂ ಪಾತ್ರವನ್ನು ನೆಗೆಟಿವ್ ಶೇಡ್ ಗೆ ತರುವ ಅಥವಾ ವಿಲನ್ ರೂಪಕ್ಕೆ ತರುವ ಯೋಜನೆಯು ಮುಂದಾಗಿತ್ತು. ಜೊತೆಗೆ ಪಾತ್ರಕ್ಕೆ ತಕ್ಕಂತಹ ತೂಕವು ಹೆಚ್ಚಾಗಿ ದೊರೆಯುತ್ತಿರಲಿಲ್ಲ. ಇದೇ ಕಾರಣದಿಂದ ಪ್ರಣವ್ ಅವರು ಧಾರವಾಹಿಯನ್ನು ತ್ಯಜಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈಗ ಅದೇ ಸ್ಥಾನಕ್ಕೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿದ್ದ ನಾಗಾರ್ಜುನ ಅವರು ಈ ಪಾತ್ರವನ್ನು ಇನ್ನುಮುಂದೆ ನಿರ್ವಹಿಸುತ್ತಾರೆ ಎಂದು ಸೀರಿಯಲ್ ತಂಡವು ಮಾಹಿತಿಯನ್ನು ಹೊರಹಾಕಿದೆ. ಈ ಮಾಹಿತಿಯು ನಿಮಗೆ ಇಷ್ಟವಾದಲ್ಲಿ ಈ ಕೂಡಲೇ ಶೇರ್ ಮಾಡಿ.

Leave a Reply

Your email address will not be published. Required fields are marked *