Featuredಆರೋಗ್ಯ ಮಾಹಿತಿ

ಅನಾನಸ್ ಈ ರೋಗವನ್ನೂ ವಾಸಿ ಮಾಡುತ್ತದೆಯೇ. ತಿಳಿಯಲು ಓದಿ.

ಅನಾನಸ್ ಹಣ್ಣು : ಈ ಹಣ್ಣು ಮೂಲತಹ ಬ್ರೆಜಿಲ್ ದೇಶದ್ದು. ಭಾರತದಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪಶ್ಚಿಮ ಕರಾವಳಿಗಳಲ್ಲಿ ವಿಶೇಷವಾಗಿ ಇವನ್ನು ಬೆಳೆಯುವರು. ಕರ್ನಾಟಕದ ಸಿರ್ಸಿ, ಕುಮಟಾ, ಹೊನ್ನಾವರ ಭಾಗಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಸುತ್ತಾರೆ. ಇದು ಗೆಡ್ಡೆ ಯಂತೆ ಭೂಮಿಯೊಳಗೆ ಬೆಳೆಯುವುದು. ಮೇಲ್ಭಾಗಕ್ಕೆ ಬಿರುಸಾದ ಎಲೆಗಳು ಗುಚ್ಚಾಕಾರವಾಗಿರುವವು.

ಹಣ್ಣು ಕಾಯಿಯಿದ್ದಾಗ ಮೇಲ್ಬಾಗ ಹಸಿರು ಹಾಗೂ ಬಿರುಸಾಗಿರುತ್ತದೆ. ಹಣ್ಣಾದಂತೆ ಅದು ಕೇಸರಿ ಹಳದಿ ವರ್ಣಕ್ಕೆ ತಿರುಗುತ್ತದೆ. ಬಿರುಸಾಗಿರುವುದನ್ನು ತಿನ್ನಬಾರದು. ಇದು ಒಳ್ಳೆಯದಲ್ಲ. ಹಣ್ಣಿನ ಮೇಲ್ಭಾಗವನ್ನು ಸ್ವಚ್ಛಗೊಳಿಸಿ ವೃತ್ತಾಕಾರವಾಗಿ ಕತ್ತರಿಸಿಕೊಂಡು ಹುಳಿ ಹೆಚ್ಚಾಗಿದ್ದರೆ ಸ್ವಲ್ಪ ಸಕ್ಕರೆ ಹಾಕಿಕೊಂಡು ತಿನ್ನಬಹುದು.

ಇಲ್ಲವೇ ಮಿಕ್ಸಿಯಲ್ಲಿ ಹಾಕಿ ರಸವನ್ನು ತೆಗೆದು ಕುಡಿಯಬಹುದು. ಅನಾನಸ್ ಹಣ್ಣಿನಿಂದ ಆಗುವ ಪ್ರಯೋಜನಗಳು ಹಲವಾರು. ಹಾಗಾದರೆ ಬನ್ನಿ ಇದರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ. ಅನಾನಸ್ ಹಣ್ಣಿನಿಂದ ಮಾತ್ರ ಅಲ್ಲ ಅದರ ಎಲೆಗಳಿಂದ ಕೂಡ ಬಹಳ ಪ್ರಯೋಜನಗಳನ್ನು ನಾವು ಪಡೆಯಬಹುದು.

ಎಲೆಗಳ ರಸವನ್ನು ತೆಗೆದುಕೊಳ್ಳುವುದರಿಂದ ಹೊಟ್ಟೆಯಲ್ಲಿರುವ ಜಂತುಹುಳುಗಳು ನಷ್ಟವಾಗುತ್ತದೆ. ಹಣ್ಣಿನ ರಸವು ರ’ಕ್ತ ಪಿತ್ತ, ರ’ಕ್ತ ವಿಕಾರ ಹಾಗೂ ಹೊಟ್ಟೆ ಮುರಿತಗಳನ್ನು ಕಡಿಮೆ ಮಾಡುವುದು. ರ’ಕ್ತಕ್ಕೆ ವರ್ಣ ಕೊಡುವುದು, ಮೂತ್ರಲ, ಸ್ವೇದಜನಕ ಹಾಗೂ ಶರೀರದಲ್ಲಿಯ ದಾಹವನ್ನು ಕಡಿಮೆ ಮಾಡುವುದು. ಅನಾರ್ತವಕ್ಕೆ (ಕೆಂಪು ಮುಟ್ಟು ಕಾಣದೇ ಇರುವಾಗ) ಅನಾನಸ್ ಕಾಯಿಯ ರಸ 2 ಚಮಚ, ಆಲದ ಮರದ ಚಕ್ಕೆಯ ಚೂರ್ಣ 1 ಚಮಚ, ಇದಕ್ಕೆ ಬೆಲ್ಲ ಸೇರಿಸಿ ನಿತ್ಯ ಸೇವಿಸಬೇಕು. ಕ್ರಮೇಣ ಮುಟ್ಟು ಸರಿಯಾಗಲು ಆರಂಭಿಸುತ್ತದೆ.

ಜ್ವರ ಹೆಚ್ಚಿಗೆ ಇದ್ದಾಗ ಬೆವರು ಬರಿಸಲು ಪಕ್ವವಾದ ಹಣ್ಣಿನ ರಸವನ್ನು ಕುಡಿಸಬೇಕು. ಧಾತು ಕ್ಷೀಣತೆಯಲ್ಲಿ ಅಮೃತ, ತ್ರಿಫಲ, ವಿದಾರಿಕಂದ, ನಾಗಕೇಶರ ಮುಂತಾದವುಗಳೊಡನೆ ತೆಗೆದುಕೊಳ್ಳಬೇಕು. ತಾಯಿಯ ರಸ ಗರ್ಭಪಾ’ತಕ್ಕೆ ಕಾರಣವಾದರೆ, ಪೂರ್ಣ ದಿವಸಗಳು ತುಂಬಿದ ಗರ್ಭಿಣಿಗೆ ಬೇಗ ಹೆರಿಗೆಯಾಗಲು ಹಣ್ಣಿನ ರಸ ಉಪಯುಕ್ತ. ಇಡೀ ಒಂದು ಹಣ್ಣಿನರಸ ತೆಗೆದುಕೊಳ್ಳಬೇಕಾಗಬಹುದು.

Leave a Reply

Your email address will not be published. Required fields are marked *