ಸಿನಿಮಾ ಮಾಹಿತಿ

ರಮೇಶ್ ಅರವಿಂದ್ ಅವರ ಪುತ್ರಿಯ ವಿವಾಹದ ಎಕ್ಸ್ಕ್ಲೂಸಿವ್ ಚಿತ್ರಗಳನ್ನು ನೋಡಿ.

ಇವರು ನೂರು ಜನ್ಮಕೂ ನೂರಾರು ಜನ್ಮಕೂ ಎಂದು ಹಾಡುತ್ತಾ ಸಾವಿರಾರು ಜನರ ಮನಸ್ಸನ್ನು ಕದ್ದವರು. ಅದರ ಜೊತೆ ಜೊತೆಗೆ ನಮ್ಮೂರ ಮಂದಾರ ಹೂವೆ ಚಿತ್ರದಲ್ಲಿ ಮುತ್ತು ಮುತ್ತು ನೀರ ಹನಿಯ ತಾಂ ತನನನ ಎಂದು ಕುಣಿಯುತ್ತಾ ಎಲ್ಲರ ಮನದಲ್ಲಿ ಮನೆ ಮಾಡಿಕೊಂಡವರು. ಹಾಗೆಯೇ ರಾಮ ಶಾಮ ಭಾಮ ಸಿನಿಮಾದಲ್ಲಿ ಡಿಸಿ ಬೋಪಣ್ಣ ಅವರ ಜೊತೆ ಪ್ರಣಯವಾಡುತ್ತಾ ಎಂದೆಂದಿಗೂ ಚಿರಯುವಕ ಎಂದು ಕರೆಸಿಕೊಳ್ಳುತ್ತಾರೆ.

ಇವರು ಯಾರೆಂದು ನಿಮಗೆಲ್ಲಾ ಈಗಾಗಾಲೇ ಗೊತ್ತಾಗಿರಬೇಕು ಅಲ್ಲವೇ. ಅವರೇ ನಮ್ಮೆಲ್ಲರ ಅಚ್ಚುಮೆಚ್ಚಿನ ಖ್ಯಾತ ನಟ ರಮೇಶ್ ಅರವಿಂದ್. ರಮೇಶ್ ಅವರ ಪುತ್ರಿಯ ವಿವಾಹವು ಇಂದು ಅಂದರೆ 28 ಡಿಸೆಂಬರ್ ರಂದು ಅದ್ದೂರಿಯಾಗಿ ನೆರವೇರಿದೆ. ನಟ ರಮೇಶ್ ಅರವಿಂದ್ ಅವರ ಮನೆಯಲ್ಲಿ ಮದುವೆ ಸಂಭ್ರಮ. ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಗಳ ಪುತ್ರಿ ನಿಹಾರಿಕ ಅವರ ಮದುವೆ ಅಕ್ಷಯ್ ಅವರೊಂದಿಗೆ ಇದೇ ಡಿಸೆಂಬರ್ 28 ರಂದು ನಡೆಯಲಿದೆ.ನಿಹಾರಿಕ ಹಾಗೂ ಅಕ್ಷಯ್ ಇಬ್ಬರೂ ಸಹ ಒಂದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈಗ ನವಜೀವನಕ್ಕೆ ಕಾಲಿಡುತ್ತಿದ್ದಾರೆ. ರಮೇಶ್ ಅವರ ಮನೆಯಲ್ಲಿ ಇದೇ ವಿಚಾರವಾಗಿ ಸಂಭ್ರಮವು ಮನೆ ಮಾಡಿದ್ದು ಸ್ಯಾಂಡಲ್’ವುಡ್ ನ ಗಣ್ಯವ್ಯಕ್ತಿಗಳಿಂದ ಶುಭಾಶಯಗಳು ಸುರಿಮಳೆ ಸುರಿದು ಬಂದಿದೆ. ಅದ್ಧೂರಿಯಾಗಿ ಮದುವೆ ಸಮಾರಂಭವು ಇಂದು ನೆರವೇರಿತು.

ಈ ಕಾರ್ಯಕ್ರಮಕ್ಕೆ ಖ್ಯಾತ ಹಿರಿಯ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಶಿವಾಜಿ ಸುರತ್ಕಲ್ ಸಿನಿಮಾ ತಂಡದವರು ಹಾಜರಿದ್ದು ಎಲ್ಲರಲ್ಲೂ ಹರ್ಷ ವ್ಯಕ್ತವಾಗುವಂತೆ ಮಾಡಿತ್ತು. ಈ ಸಂದರ್ಭದ ಫೋಟೋ ಒಂದನ್ನು ನಾಗತಿಹಳ್ಳಿ ಚಂದ್ರಶೇಖರ್‌ ಅವರು ಹಂಚಿಕೊಂಡಿದ್ದಾರೆ. ‘ಹೆಣ್ಣು ಮಕ್ಕಳ ಮದುವೆ ಮಾಡುವಲ್ಲಿ ಅಪ್ಪ-ಅಮ್ಮ ಪಡುವ ಖುಷಿಗೆ ಪಾರವೆಲ್ಲಿ? ಈಕೆ ನೀಹಾರಿಕೆ.

ರಮೇಶ್-ಅರ್ಚನಾ ಮುದ್ದಿನ ಮಗಳು. ಇಂದು ಅಕ್ಷಯ್‌ನನ್ನು ವರಿಸಿದಳು. ಮದುಮಕ್ಕಳ ಬಾಳು ಬೆಳಗಲಿ’ ಎಂದು ನಾಗತಿಹಳ್ಳಿ ಹರಸಿದ್ದಾರೆ. ಚಿತ್ರರಂಗದವರಿಗೆ ಜನವರಿ ಎರಡನೇ ವಾರದಲ್ಲಿ ವಿಶೇಷವಾಗಿ ಆರತಕ್ಷತೆ ಇಟ್ಟುಕೊಳ್ಳುವುದಾಗಿ ರಮೇಶ್ ಅರವಿಂದ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

Leave a Reply

Your email address will not be published. Required fields are marked *