ನಿಮ್ಮ ಮೊಬೈಲ್ ಕಳೆದು ಹೋದ್ರೆ ಚಿಂತಿಸಬೇಡಿ ಇಲ್ಲಿದೆ ಸುಲಭ ಪರಿಹಾರ ಕೇವಲ ಒಂದೇ ನಿಮಿಷದಲ್ಲಿ ಸಿಗುತ್ತದೆ.
ನಿಮ್ಮ ಮೊಬೈಲ್ ಕಳೆದು ಹೋದ್ರೆ ಚಿಂತಿಸಬೇಡಿ ಇಲ್ಲಿದೆ ಸುಲಭ ಪರಿಹಾರ. ಕೇವಲ ಒಂದೇ ನಿಮಿಷದಲ್ಲಿ ಸಿಗುತ್ತದೆ. ಹೌದು ಕೇವಲ ಒಂದು ನಿಮಿಷನ ಅಂತ ಯೋಚನೆ ಮಾಡಬೇಡಿ. ಹೇಗೆ ಏನು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಇದು ತುಂಬ ಜನರ ಸಮಸ್ಯೆ, ಮೊಬೈಲ್ ಕಳೆದು ಹೋದರೆ ಏನು ಮಾಡಬೇಕು ಅನ್ನೋದು. ಕೆಲವರು ಹೊಸ ಮೊಬೈಲ್ ಖರೀದಿ ಮಾಡುವಾಗಲೇ ಇನ್ಸುರೆನ್ಸೆ ನ ಮೊರೆ ಹೋಗುತ್ತಾರೆ ಅದು ಕೂಡ ಕೆಲ ಒಮ್ಮೆ ಕ್ಲೇಮ್ ಆಗುವುದು ಅನುಮಾನ.
ಇನ್ನು ಕೆಲವರು ಪ್ಲೇ ಸ್ಟೋರ್ ನಲ್ಲಿ ಸಿಗುವ ಫೇಕ್ ಆಪ್ ಗಳ ಬಲೆಗೆ ಬಿದ್ದು ಮೊಬೈಲ್ ಗೆ ವೈರಸ್ ತುಂಬಿಸಿಕೊಳ್ಳುತ್ತಾರೆ. ಆದರೆ ಈಗ ನಾವು ನಿಮಗೋಸ್ಕರ ನೀವು ಬಹಳ ಪ್ರೀತಿಸುವ ನಿಮ್ಮ ಮೊಬೈಲ್ ಏನಾದರು ಕಳೆದುಹೋದರೆ ಹುಡುಕುವ ಒಂದು ಸುಲಭ ಮಾರ್ಗ ತಿಳಿಸುತ್ತೇವೆ ನೋಡಿ. ಎಲ್ಲರಿಗು ಇರುವ ಇನ್ನೊಂದು ದೊಡ್ಡ ಚಿಂತೆ ಎಂದರೆ ಮೊಬೈಲ್ ನಲ್ಲಿರುವ ಡೇಟಾ. ಹೌದು ಮೊಬೈಲ್ ಕಳೆದು ಹೋದರೆ ಅದರಲ್ಲಿರುವ ಚಿತ್ರಗಳು, ವೀಡಿಯೊಗಳು ದುರುಪಯೋಗ ಆಗುವ ಸಂಭವವಿರುತ್ತದೆ.
ಇದಕೆಲ್ಲ ಒಂದು ಪರಿಹಾರ ಈಗ ಸಿಕ್ಕಿದೆ android.com/find ಈ ವೆಬ್ಸೈಟ್ ತೆರೆದು ನೀವು ನಿಮ್ಮ ಜಿ ಮೇಲ್ ಅಕೌಂಟ್ ಮೂಲಕ ಲಾಗಿನ್ ಆಗಬೇಕಾಗುತ್ತದೆ. ಲಾಗಿನ್ ಆದ ಕೂಡಲೇ ನೀವು ಬಳಸುತ್ತಿದ ಎಲ್ಲ ಮೊಬೈಲ್ ಗಳ ಲಿಸ್ಟ್ ತೋರಿಸುತ್ತದೆ. ಆಲ್ಲಿ ನೀವು ನಿಮ್ಮ ಹಳೆಯ ಕಳೆದು ಹೋದ ಡಿವೈಸ್ಅನ್ನು ಆಯ್ಕೆಮಾಡಿಕೊಳ್ಳಿ.
ನಂತರ ಗೂಗಲ್ ಮ್ಯಾಪ್ ನ ಸಹಾಯದಿಂದ ನಿಮ್ಮ ಕಳೆದು ಹೋದ ಮೊಬೈಲ್ ಎಲ್ಲಿದೆ ಅಂದರೆ ಯಾವ ಸ್ಥಳದಲ್ಲಿದೆ ಎಂದು ನೀವು ನೋಡಬಹುದು. ಹಾಗೆ ಸೆಟ್ ಅಪ್ ಲಾಕ್ ಅಂಡ್ ಎರೇಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್ ನಲ್ಲಿರುವ ಡಾಟಾ ಕೂಡ ಇದರ ಮೂಲಕವೇ ಡಿಲೀಟ್ ಕೂಡ ಮಾಡಬಹುದು.
ಹಾಗೆ ನಿಮ್ಮ ಮೊಬೈಲ್ ನಿಮ್ಮ ಮನೆಯಲ್ಲೇ ಕಳೆದು ಹೋಗಿದ್ದರೆ, ಈ ವೆಬ್ಸೈಟ್ ನ ಮೂಲಕವೇ ರಿಂಗ್ ಕೂಡ ಮಾಡಬಹುದು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.