ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಕಡೆಯಿಂದ ಮೇಘನಾಗೆ ಬಂತು ಭರ್ಜರಿ ಗಿಫ್ಟ್. ಭಾವುಕರಾದ ಮೇಘನ.
ಭಾರತೀಯ ಸಂಸ್ಕೃತಿಯಲ್ಲಿ ಭಾರತೀಯರು ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುವುದು ಅವರಲ್ಲಿ ಬರುವ ಹಬ್ಬಗಳ ಹಾಗೂ ಹಬ್ಬದ ಸಡಗರ, ಸಂಭ್ರಮಕ್ಕೆ. ಅಂತೆಯೇ ವಿವಿಧ ಹಬ್ಬಗಳಿಗೆ ವಿವಿಧ ರೀತಿಯ ಆಚರಣೆಗಳನ್ನು ಹೊಂದಿರುವ ನಾವು ದೀಪಾವಳಿ ಬಂತೆಂದರೆ ವಿಶೇಷ ಉಡುಗೊರೆಗಳು ಹಾಗೂ ಪ್ರತಿ ಹಬ್ಬಕ್ಕೂ ಹೊಸ ಬಟ್ಟೆಯನ್ನು ಖರೀದಿ ಮಾಡುವುದು ಮತ್ತು ಇನ್ನಿತರ ರೀತಿಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಲು ಇಚ್ಚಿಸುತ್ತೇವೆ.
ಇತ್ತೀಚೆಗಷ್ಟೇ ತಾಯ್ತನದ ಸಂಭ್ರಮವನ್ನು ಅನುಭವಿಸುತ್ತಿರುವ ಮೇಘನಾ ಚಿರು ಸರ್ಜಾ ಅವರಿಗೆ ಕೂಡ ವಿಭಿನ್ನವಾದ ಒಂದು ಗಿಫ್ಟ್ ಬಂದಿದೆ. ಸಾಮಾನ್ಯವಾಗಿ ತಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ಕೋರುವರು ಕಾಣಿಕೆಯನ್ನ ನೀಡುತ್ತಾರೆ ಅಥವಾ ಬೆಲೆಬಾಳುವ ವಸ್ತುವನ್ನು ಉಡುಗೊರೆಯಾಗಿ ಕೊಡುತ್ತಾರೆ. ತಮ್ಮ ವಿಶಿಷ್ಟ ದಿನವನ್ನು ಆಚರಿಸಿಕೊಳ್ಳುತ್ತಾರೆ.
ಚೊಚ್ಚಲ ಬಾಣಂತನದಲ್ಲಿರುವ ಮೇಘನಾ ಚಿರಂಜೀವಿ ಸರ್ಜಾ ವರಿಗೆ ಖ್ಯಾತ ನಟ ನಟಿಯರಾದ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ದೇವರಾಜ್ ಅವರು ಒಂದು ವಿಶಿಷ್ಟವಾದ ಉಡುಗೊರೆಯನ್ನು ನೀಡಿದ್ದಾರೆ. ಇದರ ಬಗ್ಗೆ ಮೇಘನ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರೀತಿ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಹಸಿರು ಕೆಂಪು ಹಾಗೂ ನೀಲಿ ಬಣ್ಣದಲ್ಲಿ ಇರುವ ಈ ಡಬ್ಬದ ಮೇಲೆ ಹನಿ ಸ್ಪೈಸ್ ಎಂದು ಬರೆಯಲಾಗಿದೆ. ಹಾಗೂ ಒಳಗಡೆ ಗುಲಾಬಿ ಬಣ್ಣದ ಪೇಪರ್ ಮೇಲೆ ಶಕ್ತಿಶಾಲಿ ಹೆಣ್ಣಿಗೆ ನಾವು ಒಂದು ವಿಶಿಷ್ಟವಾದ ಸಿಹಿ ಮತ್ತು ಹುಳಿಯಾದ ಪ್ರೀತಿಯ ಉಡುಗೊರೆಯನ್ನು ಕಳಿಸಿ ಕೊಡುತ್ತಿದ್ದೇವೆ. ಇದು ನಿಮಗೆ ಅದೃಷ್ಟ ಹಾಗೂ ಒಳ್ಳೆಯ ವಾತಾವರಣವನ್ನು ಸೃಷ್ಟಿ ಮಾಡಲಿದೆ.
ಸಂಕ್ರಾಂತಿ ಹಬ್ಬದ ಶುಭಾಶಯಗಳು ನಿಮ್ಮ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ದೇವರಾಜ್ ಎಂದು ಡಬ್ಬದ ಮೇಲೆ ಬರೆಯಲಾಗಿದೆ. ಈ ಚಿತ್ರವನ್ನು ರಾಗಿಣಿ ಪ್ರಜ್ವಲ್ ದೇವರಾಜ್ ಅವರು ಕೂಡ ರೀ ಶೇರ್ ಮಾಡಿದ್ದಾರೆ. ಲವ್ ಯು ಮೇಘ ಎಂದು ರೀ ಶೇರ್ ಮಾಡಿರುವ ರಾಗಿಣಿ ಅವರು ಪರಸ್ಪರ ಪ್ರೀತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.