ಲೈವ್ ಗೆ ಬಂದು ಭರ್ಜರಿ ಸುದ್ದಿ ಕೊಟ್ಟ ದ್ರುವ. ನನಗೆ ದುರಹಂ’ಕಾರ ಇದೆ ಅಂತ ಅಂದ್ಕೋಬೇಡಿ ಅಂದ್ರು.
ಕನ್ನಡ ಚಿತ್ರರಂಗದಲ್ಲಿ ನಟ ನಟಿಯರ ಸೋಶಿಯಲ್ ಮೀಡಿಯಾ ದರ್ಬಾರು ನಡೆಯುತ್ತಲೇ ಇರುತ್ತದೆ. ಹಾಗೆಯೇ ಕನ್ನಡದ ಹೆಸರಾಂತ ನಟ ಚಿರಂಜೀವಿ ಸರ್ಜಾ ಅವರ ಸಹೋದರನಾದ ಧ್ರುವ ಸರ್ಜಾ ರವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಒಂದು ಹೊಸ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಏನಿದು, ಆ ಸುದ್ದಿ. ಏನು ಹೇಳಿದರು ನಟ ಧ್ರುವ ಸರ್ಜಾ ಅಂತ ನೋಡೋಣ ಬನ್ನಿ.
ಖ್ಯಾತ ನಟ ಚಿರಂಜೀವಿ ಸರ್ಜಾ ಅವರ ಅಗಲಿಕೆಯ ನಂತರ ಧ್ರುವ ಹಾಗೂ ಅವರ ಕುಟುಂಬದ ಸದಸ್ಯರಲ್ಲಿ ಕರೋನವೈ’ರಸ್ ಕಾಣಿಸಿಕೊಂಡಿತ್ತು. ನಂತರ ಮೇಘನಾ ಚಿರಂಜೀವಿ ಸರ್ಜಾ ಅವರಿಗೆ ಮುದ್ದಾದ ಗಂಡು ಮಗು ಜನನವಾಯಿತು. ಮನೆಯಲ್ಲಿ ಪ್ರತಿದಿನವೂ ಹಬ್ಬದ ವಾತಾವರಣವಿರುವ ಕಾರಣ ಧ್ರುವ ಸರ್ಜಾ ಅವರು ತಮ್ಮ ಪರ್ಸನಲ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು.
ಆದರೆ ಇಂದು ಆ ಬಿಜಿ ಸ್ಕೆಡ್ಯೂಲ್ ನಲ್ಲಿ ಧ್ರುವ ಸರ್ಜಾ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಬಂದು ಸಿಹಿ ಸುದ್ದಿ ನೀಡಿದ್ದಾರೆ. ಅದೇನೆಂದರೆ ಬಹುದಿನಗಳಿಂದ ಲಕ್ಷಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಪೊಗರು ಸಿನಿಮಾ ಬರುವ ತಿಂಗಳು 19 ನೇ ತಾರೀಕು ಬಿಡುಗಡೆಗೊಳ್ಳುತ್ತಿರುವುದು.
ಹಲವಾರು ದಿನಗಳಿಂದ ಚಿತ್ರ ರೆಲೀಸ್ ಗಾಗಿ ಎಲ್ಲರೂ ಕಾಯುತ್ತಿದ್ದರು.ಅದಲ್ಲದೇ ನಮಗೆಲ್ಲಾ ಗೊತ್ತಿರುವ ಹಾಗೆ ಕೊ’ರೋನ ಸಮಸ್ಯೆಯಿಂದ ಇಡೀ ವಿಶ್ವವೇ ನಡುಗಿ ಹೋಗಿತ್ತು. ಇಂತಹ ಸಮಯದಲ್ಲಿ ಟೀಸರ್ ಟ್ರೈಲರ್ ಗಳಿಗೆ ಅತ್ಯುನ್ನತ ರೆಸ್ಪಾನ್ಸ್ ಗಳನ್ನು ನೀಡುತ್ತಿದ್ದ ಫ್ಯಾನ್ಸ್ಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ ಹಾಗೂ ಕನ್ನಡ ಚಿತ್ರರಂಗದಲ್ಲಿ ಅವರಿಗೆ ಬೆನ್ನೆಲುಬಾಗಿ ನಿಂತು ಪ್ರಶಂಸೆ ನೀಡಿದ ದಿಗ್ಗಜರೆಲ್ಲರಿಗೂ ನಮಸ್ಕಾರಗಳನ್ನು ಸೂಚಿಸಿದ್ದಾರೆ.
ಇಷ್ಟು ದಿನ ನಾನು ನನ್ನ ಚಿತ್ರಗಳನ್ನು ಯಾವುದೇ ಒಂದು ಎಕ್ಸ್ಪೆಕ್ಟೇಶನ್ ಇಟ್ಟುಕೊಳ್ಳದೇ ಬಂದು ನೋಡಬೇಡಿ ಎಂದು ಹೇಳುತ್ತಿದ್ದೆ. ಆದರೆ ಇವತ್ತು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ. ದಯಮಾಡಿ ಇದನ್ನು ಅ’ಹಂಕಾರ ಎಂದು ತಿಳಿದುಕೊಳ್ಳಬೇಡಿ. ಈ ಬಾರಿ ನೀವು ನನ್ನ ಚಿತ್ರವನ್ನು ನೋಡಲು ಬರುವಾಗ ಬಹಳಷ್ಟು ಎಕ್ಸ್ಪೆಕ್ಟೇಶನ್ ಇಟ್ಟುಕೊಂಡು ನನ್ನ ಚಿತ್ರವನ್ನು ನೋಡಲು ಬನ್ನಿ. ನಿಮಗೆ ಕಂಡಿತ ನಿರಾಸೆ ಆಗುವುದಿಲ್ಲ ಎಂದು ಹೇಳಿದ್ದಾರೆ.
ಅದ್ದೂರಿಯಾಗಿ ರೆಸ್ಪಾನ್ಸ್ ಸಿಕ್ಕಿರುವಾಗ ಪೊಗರು ಯಾವ ರೀತಿ ಸದ್ದು ಮಾಡುತ್ತದೆ ಎಂದುಹಲವಾರು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.