ಕೆಜಿಎಫ್ ನಿಂದ ಬಿಡುವು ಮಾಡಿಕೊಂಡು ಯಶ್ ಕೊಟ್ರು ವಿಶೇಷ ಸರ್ಪ್ರೈಸ್.
ಕರ್ನಾಟಕದಾದ್ಯಂತ ಯಾವುದೇ ಮೂಲೆಗೆ ಹೋದರೂ ನಮಗೆ ಈಗ ಕೇಳಿ ಬರುವುದು ಕೇವಲ ಒಂದೇ ಶಬ್ದ ಅದು ಕೆಜಿಎಫ್ ಚಾಪ್ಟರ್ 2 ಹಾಗೂ ಅದರ ನಿರ್ದೇಶಕರಾದ ಪ್ರಶಾಂತ್ ನೀಲ್. ನಿರ್ಮಾಪಕರಾದ ವಿಜಯ್ ಕಿರಗಂದೂರ್. ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರದ ಮುಖ್ಯ ಪಾತ್ರಧಾರಿ ರಾಕಿಂಗ್ ಸ್ಟಾರ್ ಯಶ್.
ಇತ್ತೀಚೆಗಷ್ಟೇ ಯಶ್ ಅವರ ಕೆಜಿಎಫ್ ಚಾಪ್ಟರ್ ಟು ಚಿತ್ರದ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ವಿಶ್ವದಾದ್ಯಂತ ದಾಖಲೆಯನ್ನು ಮುರಿದು ಹಾಕಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ. ಇಂದಿನ ದಿನದ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಗೆ ಬಂದಿರುವ ಒಟ್ಟು ವೀಕ್ಷಣೆಗಳು 15 ಕೋಟಿ 24 ಲಕ್ಷದ 16 ಸಾವಿರ.
ಇಷ್ಟೆಲ್ಲಾ ಸಂಭ್ರಮದ ನಡುವೆ ಬಹಳವೇ ಬಿಜಿಯಾಗಿದ್ದ ಯಶ್ ಅವರು ತಮ್ಮ ಕುಟುಂಬಕ್ಕೆ ಒಂದು ಸರ್ಪ್ರೈಸ್ ಅನ್ನು ನೀಡಿದ್ದಾರೆ. ತಮ್ಮ ಮಡದಿ ರಾಧಿಕಾ ಪಂಡಿತ್, ಮುದ್ದು ಮಕ್ಕಳಾದ ಯಥರ್ವ ಹಾಗೂ ಆಯ್ರ ನಾಲ್ಕು ಜನರು ಒಡಗೂಡಿ ವಿಶೇಷವಾಗಿ ಈ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ.
ಜನವರಿ 11 ರಂದು ರಾಧಿಕಾ ಪಂಡಿತ್ ಹಾಗೂ ಯಶ್ ಅವರ ಪುತ್ರಿಯ ಹುಟ್ಟುಹಬ್ಬ ಅದ್ದೂರಿಯಾಗಿ ನಡೆದಿತ್ತು. ಇದೊಂದು ಅದ್ಭುತ ಜಾಗ ಮಾಲ್ಡಿವ್ಸ್ ಇದೋ ನಾವು ನಿಮ್ಮ ಬಳಿ ಬಂದಿದ್ದೇವೆ. ಇನ್ನೂ ಕೆಲವು ದಿನಗಳು ಇಲ್ಲೇ ಇರಲಿದ್ದೇವೆ ಎಂದು ಯಶ್ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮಾಲ್ಡೀವ್ಸ್ ನ ವಿಶೇಷ ದ್ವೀಪವಾದ ಕೊಣರಾಡ್ ಐಲ್ಯಾಂಡ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಕುಟುಂಬವು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ನಾಲ್ಕು ಚಿತ್ರಗಳನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈ’ರಲ್ ಆಗಿದೆ. ಅಲ್ಲದೆ ಈ ಚಿತ್ರಕ್ಕೆ ಸುಮಾರು 15 ಲಕ್ಷ ಮೆಚ್ಚುಗೆಗಳು ವ್ಯಕ್ತವಾಗಿದ್ದು, ಇನ್ಸ್ಟಗ್ರಾಂ ಖಾತೆಯ ಎಲ್ಲೆಡೆಯೂ ಈ ಚಿತ್ರಗಳು ವೈ’ರಲ್ ಆಗಿದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.