ಯಶ್ ಕುಟುಂಬದ ಮಾಲ್ಡೀವ್ಸ್ ಪ್ರವಾಸ ಸಂಪೂರ್ಣ ಫ್ರೀ. ಓದಿದರೆ ಶಾಕ್ ಆಗ್ತೀರಾ.
ವಿಶ್ವದಾದ್ಯಂತ ಕೋ’ರೋನ ಅ’ಟ್ಟಹಾಸ ಎಲ್ಲೆಡೆ ಮಿತಿಮೀರಿದ್ದು ಕಳೆದ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಕೋಟಿ ರೂಪಾಯಿಗಳು ನಷ್ಟವಾಗಿರುವುದು ನಮಗೆಲ್ಲ ಗೊತ್ತೇ ಇದೆ. ಅದೇ ರೀತಿಯಾಗಿ ಕೇವಲ ವ್ಯಾಪಾರವಷ್ಟೇ ಅಲ್ಲ ಪ್ರವಾಸೋದ್ಯಮವು ಕೂಡ ವಿಶ್ವದಾದ್ಯಂತ ನೆಲ ಕಚ್ಚಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ.
ಮುಂಚೆ 1 ವರ್ಷದ ಹಿಂದೆ ಭಾರತೀಯರು ಪ್ರವಾಸ ಮಾಡುವುದರಲ್ಲಿ ಮೊದಲ ಸ್ಥಾನ ಪಡೆದಿದ್ದರು. ಆದರೆ ಕೋ’ರೋನ ರೋಗವು ಉಲ್ಬಣಗೊಂಡು ಇಡೀ ದೇಶಕ್ಕೆ ದೇಶವೇ ಲಾಕ್ ಆದ ಸಂದರ್ಭದಲ್ಲಿ ಮನೆಯಿಂದಲೂ ಕೂಡ ಹೊರಬರಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗಲೂ ದೇಶದಲ್ಲಿ ಕೋ’ವಿಡ್ ವ್ಯಾಧಿಯು ಅಲ್ಪ ಪ್ರಮಾಣದಲ್ಲಿ ಇದ್ದು ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಕೇವಲ ವ್ಯಾಪಾರವಷ್ಟೇ ಅಲ್ಲ ಕನ್ನಡ ಚಿತ್ರರಂಗ, ನಟನಾ ಬಳಗ, ಬಂದರು, ದೇಶ ವಿದೇಶಗಳ ವಹಿವಾಟು ಹಾಗೂ ಇನ್ನಿತರ ಎಲ್ಲ ವ್ಯಾಪಾರಗಳು ಕೂಡ ಲಕ್ಷಾಂತರ ಕೋಟಿ ನಷ್ಟವನ್ನು ಅನುಭವಿಸುತ್ತಿವೆ. ಆದರೆ ಹೊಸ ವರ್ಷ ಶುರುವಾದ ನಂತರದಿಂದ ಎಲ್ಲೆಡೆ ವ್ಯಾಪಾರ ವಹಿವಾಟುಗಳು ಮತ್ತೊಮ್ಮೆ ನಿಧಾನವಾಗಿ ಚಿಗುರೊಡೆಯುತ್ತಿದ್ದು, ಜನರು ಕೊಂಚ ಸುಧಾರಿಸಿಕೊಳ್ಳುವನ್ತಾಗಿದೆ.
ಹೀಗೆ ಇರಬೇಕಾದರೆ ಭಾರತೀಯರು ಹೆಚ್ಚಾಗಿ ಭೇಟಿ ನೀಡುವುದು ದುಬೈ ಅಬು ಧಬಿ, ಥೈಲ್ಯಾಂಡ್, ಬ್ಯಾಂಕಾಕ್, ಬಾಲಿ, ಇಂಡೋನೇಷಿಯಾ, ಮಾಲ್ಡಿವ್ಸ್, ಮೋರಿಷಿಯಸ್. ಈ ಸ್ಥಳಗಳಿಗೆ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿವರ್ಷವೂ ಭೇಟಿ ನೀಡುತ್ತಾರೆ. ಆದರೆ ಕೋರೋನ ನಂತರ ಪ್ರವಾಸೋದ್ಯಮವು ಇಳಿಮುಖವಾದ ಕಾರಣ ಪ್ರವಾಸಿಗರನ್ನು ಅವಲಂಬಿಸಿ ಬೆಳೆಯುತ್ತಿದ್ದ ದೇಶಗಳು ನ’ಷ್ಟಕ್ಕೆ ಒಳಗಾಗಿವೆ.
ಕೋವಿಡ್ 19 ಎಲ್ಲೆಡೆ ಇಳಿಮುಖಗೊಂಡು ಮತ್ತೊಮ್ಮೆ ಪ್ರವಾಸೋದ್ಯಮ ಚಿಗುರೊಡೆದ ಸಂದರ್ಭದಲ್ಲಿ ವಿವಿಧ ದೇಶಗಳು ಟಿವಿ ಮಾಧ್ಯಮಗಳಿಗೆ ಪತ್ರಿಕೆಗಳಿಗೆ ಅಥವಾ ಇನ್ನಿತರೆ ಯಾವುದೇ ಮಾಧ್ಯಮಗಳಿಗೂ ಜಾಹೀರಾತು ನೀಡಿದರು ಸಹ ಜನರು ಪ್ರವಾಸವನ್ನು ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕಾರಣ ಇನ್ನೂ ಕೆಲವು ದೇಶಗಳಲ್ಲಿ ಹಾಗೂ ಭಾರತದಲ್ಲಿಯೂ ಸಹ ಕೋವಿಡ್ ಇರುವುದು.
ಎಷ್ಟು ಜಾಹೀರಾತುಗಳನ್ನು ನೀಡಿದರು ಜನರು ಬಾರದ ಕಾರಣ ವಿವಿಧ ದೇಶಗಳ ಪ್ರವಾಸೋದ್ಯಮ ಇಲಾಖೆಗಳು ಹಾಗೂ ಹೋಟೆಲ್ಗಳು ಒಂದು ಹೊಸ ರೀತಿಯ ಪ್ಲಾನ್ ಮಾಡಿದೆ. ಆ ಪ್ಲಾನ್ ಏನೆಂದು ಇವತ್ತು ನಾವು ನಿಮಗೆ ತಿಳಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅವರನ್ನು ಅನುಸರಿಸುತ್ತಾರೆ. ತಮ್ಮ ನೆಚ್ಚಿನ ಸೆಲೆಬ್ರಿಟಿ ಯಾವುದೇ ಸಂದೇಶವನ್ನು ತಮ್ಮ ಅಧಿಕೃತ ಖಾತೆಯಲ್ಲಿ ರವಾನಿಸಿದರು ಸಹ ಜನ ಅದನ್ನು ಫಾಲೋ ಮಾಡುತ್ತಾರೆ.
ಇದನ್ನೇ ಬಂಡವಾಳವನ್ನಾಗಿಸಿಕೊಂಡು ವಿವಿಧ ದೇಶಗಳ ವಿವಿಧ ಹೋಟೆಲ್ಗಳು ಮತ್ತು ಮನರಂಜನಾ ಸ್ಥಳಗಳು ಸೆಲೆಬ್ರಿಟಿಗಳಿಗೆ ಉಚಿತವಾಗಿ ತಮ್ಮ ಐಷಾರಾಮಿ ಹೋಟೆಲುಗಳು ಹಾಗೂ ಐಷಾರಾಮಿ ಮನರಂಜನಾ ಸ್ಥಳಗಳಿಗೆ ಉಚಿತವಾಗಿ ಸೇವೆ ನೀಡಲು ಆಮಂತ್ರಣ ನೀಡುತ್ತಿದ್ದಾರೆ. ನಮ್ಮ ದೇಶದಿಂದ ವಿಮಾನದಲ್ಲಿ ಹೋಗುವುದರಿಂದ ಹಿಡಿದು ಅವರ ದೇಶಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಹಾಗೂ ಇನ್ನಿತರ ಎಲ್ಲಾ ಐಷಾರಾಮಿ ವ್ಯವಸ್ಥೆಗಳನ್ನು ಸೆಲೆಬ್ರಿಟಿಗಳಿಗೆ ಮಾಡಿಕೊಡುತ್ತಾರೆ.
ಇಷ್ಟೆಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡುವ ಸಂಸ್ಥೆಗಳು ಸೆಲೆಬ್ರೆಟಿಗಳಿಗೆ ಕೆಲವು ಕಂಡಿಶನ್ ಗಳನ್ನು ಹಾಕುತ್ತಾರೆ. ಮೊದಲನೆಯದಾಗಿ ತಮ್ಮ ದೇಶಗಳಿಗೆ ಬರುವ ಸೆಲೆಬ್ರಿಟಿಗಳಿಗೆ ಅಲ್ಲಿ ವಿಶೇಷವಾಗಿ ಫೋಟೋಶೂಟ್ ಮಾಡಲಾಗುತ್ತದೆ ಹಾಗೂ ಅದನ್ನು ಆಯಾ ಸೆಲೆಬ್ರಿಟಿಗಳ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲು ಮತ್ತು ಕಂಪನಿಗಳ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಟ್ಯಾಗ್ ಮಾಡಲು ಸೂಚಿಸಲಾಗುತ್ತದೆ.
ಇದೇ ರೀತಿಯಾಗಿ ನಮ್ಮ ಕನ್ನಡದ ಹೆಮ್ಮೆಯ ನಟ ಯಶ್ ಅವರಿಗೂ ಸಹ ಮಾಲ್ಡೀವ್ಸ್ ನಲ್ಲಿರುವ ವಿಶೇಷವಾದ ಕೊನರಾಡ್ ಮಾಲ್ಡೀವ್ಸ್ ರಂಗಲಿ ಐಲ್ಯಾಂಡ್ ನಲ್ಲಿ ಯಶ್ ಅವರಿಗೆ ಹಾಗೂ ಅವರ ಕುಟುಂಬಕ್ಕೆ ವಿಶೇಷವಾದ ಐಷಾರಾಮಿ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಹೀಗೆ ಮಾಡುವುದರಿಂದ ನಟ ನಟಿಯರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಚಿತ್ರಗಳನ್ನು ಹಂಚಿಕೊಳ್ಳುವುದರ ಮೂಲಕ ಪ್ರವಾಸೋದ್ಯಮವನ್ನು ಬೆಳೆಸಬಹುದಾಗಿದೆ.