ಕೂದಲಿಗೆ ಬಣ್ಣ ಹಚ್ಚುವಾಗ ಈ ವಿಚಾರಗಳನ್ನು ನೆನೆಪಿನಲ್ಲಿಟ್ಟುಕೊಳ್ಳಿ.
ಕೂದಲಿಗೆ ಬಣ್ಣ ಹಚ್ಚುವಾಗ ಎಚ್ಚರ. ಕೂದಲು ಬೆಳ್ಳಗಾಗುತ್ತದೆ ಅದಕ್ಕೆ ಕಪ್ಪು ಬಣ್ಣ ಹಚ್ಚುವುದು ಸರ್ವೇಸಾಮಾನ್ಯ. ಇನ್ನು ಕೆಲವರು ಫ್ಯಾಶನ್ ನಿಗಾಗಿ ಕೂದಲು ಕಪ್ಪಗಿದ್ದರೂ ಬೇರೆ ಬೇರೆ ಬಣ್ಣ ಹಚ್ಚಿಕೊಳ್ಳುತ್ತಾರೆ. ಹಾಗೆ ಮಾಡುವಾಗ ಕೆಲವು ಸಂಗತಿಗಳನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಆರೋಗ್ಯವಂತ ಕೂದಲನ್ನು ಕಳೆದುಕೊಳ್ಳಬೇಕಾಗುತ್ತದೆ.
ಕೂದಲು ಉದುರುತ್ತಿದ್ದರೆ ಅಲರ್ಜಿ ಸಮಸ್ಯೆ ನಿಮಗಿದ್ದರೆ ಅಥವಾ ತಲೆ ಹೊಟ್ಟು ಹೆಚ್ಚಾಗಿದ್ದರೆ ಇದನ್ನು ಮುಚ್ಚಿಕೊಳ್ಳಲು ಬಣ್ಣ ಹಾಕಲೇ ಬೇಡಿ. ಮೊದಲು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಕೂದಲಿಗೆ ಬಣ್ಣ ಹಚ್ಚಿಕೊಂಡರೆ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ನಿಮ್ಮ ಮುಖ ಹಾಗೂ ವ್ಯಕ್ತಿತ್ವವನ್ನು ಗಮನದಲ್ಲಿಟ್ಟುಕೊಂಡು ಬಣ್ಣ ಹಚ್ಚಿಕೊಳ್ಳಿ.
ನೀವು ಕೆಲಸ ಮಾಡುತ್ತಿದ್ದರೆ ಅದನ್ನು ನೆನಪಿನಲ್ಲಿಟ್ಟುಕೊಳ್ಳಿ. ನೀವು ಕೂದಲಿಗೆ ಹಚ್ಚಿಕೊಳ್ಳುವ ಬಣ್ಣ ನಿಮ್ಮ ಸೌಂದರ್ಯ ಹೆಚ್ಚಿಸಬೇಕು. ಆದರೆ ಅದು ಎಂದಿಗೂ ನಿಮ್ಮನ್ನು ಮುಜುಗರ ಗೊಳ್ಳುವಂತೆ ಮಾಡಬಾರದು. ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದರಿಂದ ಕೆಲವರಿಗೆ ತಲೆನೋವು ಶುರುವಾಗುತ್ತದೆ.
ಮತ್ತೆ ಕೆಲವರಿಗೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಕಲರ್ ಮಾಡುವ ಮೊದಲು ತಜ್ಞರನ್ನು ಭೇಟಿ ಮಾಡಿ ಅವರ ಅಭಿಪ್ರಾಯವನ್ನು ಪಡೆಯುವುದು ಒಳ್ಳೆಯದು. ಮೊದಲ ಬಾರಿ ಕೂದಲಿಗೆ ಕಲರಿಂಗ್ ಮಾಡುವ ಮೊದಲು ಬ್ಯೂಟಿಪಾರ್ಲರ್ ಸಲೂನ್ ಗೆ ಹೋಗುವುದು ಒಳ್ಳೆಯದು.
ಅಲ್ಲಿ ಏನೇನು ಮಾಡುತ್ತಾರೆ ಎಂದು ನೋಡಿಕೊಂಡು ಮುಂದಿನ ಸಲ ದಿಂದ ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಕೂದಲಿಗೆ ಕಲರಿಂಗ್ ಮಾಡುವ ಮೊದಲು ಮೆಹಂದಿಯನ್ನು ಹಚ್ಚಬೇಡಿ. ನೀವೇ ಕಲರ್ ಮಾಡಿಕೊಳ್ಳುವುದಾಗಲೀ ಪಾಕೆಟ್ ಮೇಲಿರುವ ಸಂದೇಶವನ್ನು ಸರಿಯಾಗಿ ಓದಿ. ಹಾಗೆ ನಿಯಮ ಪಾಲಿಸಿ ಅಲ್ಲಿ ಹೇಳಿದಂತೆ ಗಂಡು ಹಚ್ಚಿಕೊಳ್ಳಿ.
ವಾರಕ್ಕೆ ಎರಡು ಬಾರಿ ಎಣ್ಣೆ ಮಸಾಜ್ ಮಾಡಿಕೊಳ್ಳಿ ಒಂದು ಗಂಟೆ ಬಿಟ್ಟು ಕೂದಲನ್ನು ಸ್ವಚ್ಛಗೊಳಿಸಿಕೊಳ್ಳಿ. ಈ ರೀತಿ ಮಾಡುವುದರಿಂದ ನಿಮ್ಮ ಕೂದಲುಗಳು ಯಾವುದೇ ಹಾ’ನಿಕಾರಕ ಕೆಮಿಕಲ್ ಗಳಿಂದ ಬಚಾವಾಗುವುದು ಪಕ್ಕ.