ಸಿನಿಮಾ ಮಾಹಿತಿ

ಮಗಳ ಜೊತೆ ಮಾಲಾಶ್ರೀ ಮಾಡಿದ್ದೇನು ಗೊತ್ತಾ. ಎಲ್ಲೆಡೆ ಹರಡುತ್ತಿದೆ ಈ ಸುದ್ದಿ.

ಆಕಾಶದಾಗೆ ಯಾರೋ ಮಾಯಗಾರನು ಚಿತ್ತಾರ ಮಾಡಿ ಹೋಗೋನೇ ಎಂದು ರವಿಚಂದ್ರನ್ ಅವರ ಜೊತೆ ಹಾಡಿ ಕುಣಿದು ಹುಚ್ಚೆಬ್ಬಿಸಿದ ಒಂದು ಕಾಲದ ಖ್ಯಾತ ನಟಿ ಆಕ್ಷನ್ ಕ್ವೀನ್ ಮಾಲಾಶ್ರೀ. ಮಾಲಾಶ್ರೀ ಅವರ ಹುಟ್ಟು ಹೆಸರು ಶ್ರೀ ದುರ್ಗಾ ಎಂದು. 1973 ಆಗಸ್ಟ್ 10 ನೇ ತಾರೀಖಿನಂದು ತಮಿಳುನಾಡಿನ ಮದ್ರಾಸ್ನಲ್ಲಿ ಮಾಲಾಶ್ರೀ ಅವರು ಜನಿಸಿದರು.

ಇವರ ಸಹೋದರಿಯ ಹೆಸರು ಶುಭಶ್ರೀ ಹಾಗೂ ಇವರ ಗಂಡನ ಹೆಸರು ರಾಮು. ಕನಸಿನ ರಾಣಿ ಮಾಲಾಶ್ರೀ ಎಂದೇ ಖ್ಯಾತರಾಗಿರುವ ಇವರು ಒಂದು ಕಾಲದಲ್ಲಿ ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸುತ್ತಿದ್ದ ಪ್ರಖ್ಯಾತ ನಟಿ. ತದನಂತರ ಕ್ರಮೇಣ ಮಹಿಳಾ ಪ್ರಧಾನ ಚಿತ್ರಗಳನ್ನೇ ಮಾಡುತ್ತಾ ಬಂದ ಮಾಲಾಶ್ರೀ ಅವರು ರೆಬೆಲ್ ಆಗಿ ಕಾಣಿಸಿಕೊಳ್ಳತೊಡಗಿದರು.

ಅವರು ಮಾಡಿದ ಚಿತ್ರಗಳು ಹೀಗಿವೆ. ನಂಜುಂಡಿ ಕಲ್ಯಾಣ, ಗಜಪತಿ ಗ’ರ್ವಭಂಗ, ಪೋಲಿಸನ ಹೆಂಡತಿ, ಕಿತ್ತೂರಿನ ಹುಲಿ, ರಾಣಿ ಮಹಾರಾಣಿ, ಹೃದಯ ಹಾಡಿತು, ರಾಮಾಚಾರಿ, ಬೆಳ್ಳಿ ಕಾಲುಂಗುರ, ಸೋಲಿಲ್ಲದ ಸರದಾರ, ಗಡಿಬಿಡಿ ಅಳಿಯ ಇನ್ನೂ ಹಲವಾರು. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅವರು 2015 ರಲ್ಲಿ ಗಂಗಾ ಚಿತ್ರದ ಪಾತ್ರಕ್ಕೆ ಪಡೆದುಕೊಂಡರು. ಚಿ ಉದಯಶಂಕರ್ ಅವರು ಮಾಲಾಶ್ರೀ ಅವರನ್ನು ರಾಜಕುಮಾರ್ ಅವರ ಕುಟುಂಬಕ್ಕೆ ಪರಿಚಯಿಸಿದರು.

ಇಷ್ಟೆಲ್ಲಾ ಸಾಧನೆಗಳ ನಂತರ ಈಗ ಅವರು ತಮ್ಮ ಪತಿ ರಾಮು ಅವರ ಜೊತೆ ಸುಖವಾದ ಸಂಸಾರ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ಪೋಸ್ಟ್ ಈಗ ವೈರಲ್ ಆಗುತ್ತಿದೆ. ಅದೇನೆಂದರೆ ಮಾಲಾಶ್ರೀ ಹಾಗೂ ಅವರ ಪುತ್ರಿ ಇಬ್ಬರು ಸಹ ಒಂದೇ ರೀತಿಯ ಹಚ್ಚೆ ಹಾಕಿಸಿಕೊಂಡಿರುವುದು.

2 ಗಂಟೆಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಗಳ ಜೊತೆ ಹಚ್ಚೆ ಹಾಕಿಸಿಕೊಳ್ಳುತ್ತಿರುವ ಚಿತ್ರವನ್ನು ಮಾಲಾಶ್ರೀ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಬ್ಬರೂ ಸಹ ಒಂದೇ ರೀತಿಯ ನಗುತ್ತಿರುವ ಹಚ್ಚೆಯನ್ನು ತಮ್ಮ ಕೈಗಳ ಮೇಲೆ ಹಾಕಿಸಿಕೊಂಡಿದ್ದು ಇದು ನನ್ನ ಮೊದಲ ಹಚ್ಚೆ. ನಾನು ನನ್ನ ಮಗಳ ಜೊತೆ ಮೊದಲ ಬಾರಿಗೆ ಹಚ್ಚೆ ಹಾಕಿಸಿಕೊಂಡಿದ್ದಾನೆ ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *