ಅಮೂಲ್ಯ ಜಗದೀಶ್ ಮಂದಿರಕ್ಕೆ ಕೊಟ್ಟರು ಅಮೂಲ್ಯ ಮೊತ್ತ.
ಭಾರತದಲ್ಲೆಡೆ ಸದ್ಯಕ್ಕೆ ಕೇಳಿ ಬರುತ್ತಿರುವ ಒಂದೇ ಮಾತು ಅದೇನೆಂದರೆ ರಾಮಜನ್ಮಭೂಮಿ. ಅಯೋಧ್ಯೆಯ ವಿ’ವಾದವು ಭಾರತದ ರಾಜಕೀಯ, ಐತಿಹಾಸಿಕ ಮತ್ತು ಸಾಮಾಜಿಕ ಧಾರ್ಮಿಕ ಚರ್ಚೆಯಾಗಿದ್ದು, ಇದು ಉತ್ತರ ಪ್ರದೇಶದ ಅಯೋಧ್ಯೆ ನಗರದ ಒಂದು ಜಮೀನಿನ ಮೇಲೆ ಕೇಂದ್ರೀಕೃತವಾಗಿದೆ.
ಹಿಂದೂಗಳ ನಡುವೆ ಸಾಂಪ್ರದಾಯಿಕವಾಗಿ ತಮ್ಮ ದೇವತೆ ರಾಮನ ಜನ್ಮಸ್ಥಳವೆಂದು ಪರಿಗಣಿಸಲ್ಪಟ್ಟಿರುವ ಸೈಟ್‌ನ ನಿಯಂತ್ರಣದ ಸುತ್ತಲೂ ಸಮಸ್ಯೆಗಳು ಸುತ್ತುತ್ತವೆ. ಆ ಸ್ಥಳದಲ್ಲಿ ಬಾಬರಿ ಮಸೀದಿಯ ಇತಿಹಾಸ ಮತ್ತು ಸ್ಥಳ, ಮತ್ತು ಹಿಂದಿನ ಹಿಂದೂ ದೇವಾಲಯವನ್ನು ನೆಲಸಮಗೊಳಿಸಲಾಗಿದೆಯೇ ಅಥವಾ ಮಾರ್ಪಡಿಸಲಾಗಿದೆಯೇ ಎಂಬ ಗೊಂ’ದಲಗಳಿಗೆ ತೆರೆ ಬಿದ್ದು ಈಗ ರಾಮಜನ್ಮಭೂಮಿಯು ಹಿಂದೂಗಳಿಗೆ ಸೇರಿದ್ದು ಎಂಬ ಐತಿಹಾಸಿಕ ತೀರ್ಪು ಹೊರಬಿದ್ದಿದೆ.
ರಾಮಜನ್ಮ ಭೂಮಿಯ ಸ್ಥಳದಲ್ಲಿ ಭವ್ಯವಾದ ಶ್ರೀರಾಮ ಮಂದಿರವನ್ನು ಕಟ್ಟುವ ನಿರ್ಧಾರಕ್ಕೆ ಟ್ರಸ್ಟ್ ಮುಂದಾಗಿದ್ದು ದೇಶದಲ್ಲಿ ಅಪಾರ ಪ್ರಮಾಣದಲ್ಲಿ ಹಣ ಸಂಗ್ರಹವಾಗುತ್ತಿದೆ. ಇದರ ಮಧ್ಯೆ ಹಲವಾರು ಫ್ರಾ’ಡ್ ವೆಬ್ಸೈಟ್ಗಳು ಸಹ ಹುಟ್ಟಿಕೊಂಡಿದ್ದು ರಾಮಮಂದಿರ ಟ್ರಸ್ಟ್ ಯಾವುದೇ ಫ್ರಾ’ಡ್ ವೆಬ್ಸೈಟ್ಗಳನ್ನು ಸಂಪರ್ಕಿಸುವಂತೆ ಹಾಗೂ ಅವರಿಗೆ ಹಣವನ್ನು ನೀಡದಂತೆ ಕೋರಿಕೊಂಡಿದೆ.
ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕೂಡ ಹಲವಾರು ರಾಜಕಾರಣಿಗಳು, ನಟ ನಟಿಯರು ಹಾಗೂ ಸಾಮಾನ್ಯ ಜನರು ಕೂಡ ದಾನವನ್ನು ನೀಡಲು ಮುಂದಾಗಿದ್ದಾರೆ. ಒಂದೇ ದಿನದಲ್ಲಿ ರಾಮಮಂದಿರಕ್ಕೆ ಬರೋಬ್ಬರಿ 100 ಕೋಟಿಯಷ್ಟು ದಾನ ಬಂದಿದೆ. ಅಷ್ಟೇ ಅಲ್ಲದೆ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿಯೂ ಸಹ ಜನ ಹಣ ಸಂಗ್ರಹಿಸಿ ರಾಮಮಂದಿರ ಟ್ರಸ್ಟ್ಗೆ ರವಾನಿಸುತ್ತಿದ್ದಾರೆ.
ಕನ್ನಡದ ಪ್ರಖ್ಯಾತ ನಟಿ ಅಮೂಲ್ಯ ಜಗದೀಶ್ ಅವರು ಕೂಡ ತಮ್ಮ ಪತಿಯ ಜೊತೆ ಸೇರಿ ರಾಮಮಂದಿರಕ್ಕೆ ದೊಡ್ಡ ಮೊತ್ತದ ಹಣವನ್ನು ನೀಡಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ತಮ್ಮ ಮನಸ್ಸಿನ ಇಚ್ಚೆಯಂತೆ ಪತಿ ಪತ್ನಿಯರಿಬ್ಬರೂ ಸೇರಿ ಬರೋಬ್ಬರಿ ಒಂದೂವರೆ ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.