ನಿಮಗಾಗಿ ಎಲ್ಲವನ್ನೂ ಬಿಟ್ಟು ಬಂದವಳನ್ನು ನೀವು ಪ್ರೀತಿಸಿ, ನೋಯಿಸಬೇಡಿರಿ.
ನಿಮಗಾಗಿ ಎಲ್ಲವನ್ನೂ ಬಿಟ್ಟು ಬಂದವಳನ್ನು ನೀವು ಪ್ರೀತಿಸಿ, ನೋಯಿಸಬೇಡಿರಿ. ಇದೊಂದು ಸುಂದರವಾದ ಕಣ್ಣಂಚಿನಲ್ಲಿ ನೀರನ್ನು ತರಿಸುವ ಒಂದು ಬರಹ. ಹೆಂಡತಿಯ ಬಗ್ಗೆ ಕೆಲವು ಮಾತು : ಇದನ್ನು ಒಮ್ಮೆ ನಾವು ಅರ್ಥ ಮಾಡಿಕೊಂಡರೆ ಜೀವನ ಪ್ರೀತಿಯಿಂದ ಕೂಡಿರುತ್ತದೆ. ಹುಡುಗಿ ನೋಡೋಕೆ ಹೋದಾಗ ಮೊದಲ ಬಾರಿ ಆಕೆಯನ್ನು ನೋಡಿದಾಗ ಸೌಂದರವಾದ ಕೇವಲ ಒಬ್ಬಳು ಹುಡುಗಿಯಾಗಿದ್ದಳು ನನಗೆ ಆಕೆ.
ಇಷ್ಟಪಟ್ಟು ಒಪ್ಪಿಗೆ ಸೂಚಿಸಿ, ಫೋನ್ ನಂಬರ್ ಪಡೆದು ಅಲ್ಲಿಂದ ಹೊರಟು, ಮದುವೆಗೆ ಮುಂಚಿನ ದಿನಗಳಲ್ಲಿ ಆಕೆಯ ಜೊತೆ ಫೋನ್ ನಲ್ಲಿ ಮಾತನಾಡುತ್ತಾ ಆಕೆ ನನ್ನ ಪ್ರೇಯಸಿಯಾದಳು. ಮದುವೆಯಾದ ಬಳಿಕ ಆಕೆ ನನ್ನ ಆದರ್ಶ ಪತ್ನಿಯಾದಳು. ನಾನು ದುಃಖದಲ್ಲಿರುವಾಗ ನನ್ನ ಬಳಿ ಬಂದು ಸಾಂತ್ವನ ಹೇಳುವ ನನ್ನ ಒಳ್ಳೆಯ ಸ್ನೇಹಿತೆಯಾದಳು.
ನನ್ನನ್ನು ದೂರುವ ಜನರ ಮುಂದೆ ನನ್ನ ಪರವಾಗಿ ವಾದಿಸುವ ನ್ಯಾಯಾಧೀಶೆಯಾದಳು. ಜ್ವರದಿಂದ ಎದ್ದೇಳಲಾಗದೆ ಹಾಸಿಗೆಯಲ್ಲಿ ಬಿದ್ದಿರುವ ನನ್ನನ್ನು ಪರಿಚರಿಸುವ ಡಾಕ್ಟರ್ ಆದಳು. ಹಸಿದು ನಾನು ಮನೆಗೆ ಬಂದಾಗ ಇಷ್ಟವಾದ ತಿಂಡಿ ತಿನಿಸುಗಳನ್ನು ಮಾಡಿಕೊಡುವ ನನ್ನ ಕುಕ್ ಆದಳು. ಪ್ರೀತಿ ಮತ್ತು ವಾತ್ಸಲ್ಯವನ್ನು ಕೊಟ್ಟು ನನ್ನ ಅಮ್ಮನಾದಳು.
ನನ್ನಿಂದ ತಪ್ಪುಗಳಾದಾಗ ಅವನ್ನು ತಿದ್ದಿ ಹೇಳುವ ನನ್ನ ತಂದೆಯಾದಳು. ಸರಿ ದಾರಿಯನ್ನು ಮಾತ್ರ ತೋರಿಸಿಕೊಟ್ಟು ನನ್ನ ದಾರಿದೀಪವಾದಳು. ಕೆಲವೊಮ್ಮೆ ನನ್ನ ಜೊತೆ ತುಂಟಾಟವಾಡುತ್ತಾ ನನ್ನ ಮಗಳಾದಳು. ನನ್ನ ಮಾತುಗಳನ್ನು ತದೇಕಚಿತ್ತದಿಂದ ಆಲಿಸುವ ನನ್ನ ಅಭಿಮಾನಿಯಾದಳು. ಶತ್ರುವನ್ನು ಕೂಡ ಸ್ನೇಹದಿಂದ ಮಣಿಸಬೇಕು ಅಂತ ಕಲಿಸಿದ ನನ್ನ ಅಧ್ಯಾಪಕಿಯಾದಳು.
ಒಂದು ಜನ್ಮವಿಡೀ ನನಗೋಸ್ಕರ ಜೀವಿಸುವ ಆಕೆ ನನಗೆ ‘ನನ್ನ ಎಲ್ಲವೂ’ ಆದಳು. ಈ ಎಲ್ಲಾ ತ್ಯಾಗ, ನಿಸ್ವಾರ್ಥ ಮನಸ್ಥಿತಿ ಇರುವ ಮಡದಿಯನ್ನು ನೀವು ಇಂದಿಗೂ ನೋಯಿಸದಿರಿ. ಅವಳ ಪಾಲಿಗೆ ನೀವೇ ಎಲ್ಲ, ನಿಮ್ಮ ಪಾಲಿಗೂ ಅವಳೇ ಸರ್ವಸ್ವ ಎಂಬುವಂತೆ ಜೀವಿಸಿರಿ. ಸ್ತ್ರೀಯರನ್ನು ಗೌರವಿಸಲು ಕಲಿಯದಿದ್ದರೂ ಅವಮಾನಿಸಲು ಕಲಿಯದಿರಿ.