ಸಿನಿಮಾ ಮಾಹಿತಿ

ಪೋ’ಲಿಯೋ ಲಸಿಕೆ ಹಾಕಿಸಿ ಮುದ್ದಾದ ಚಿತ್ರ ಹಂಚಿಕೊಂಡ ಮೇಘನಾ ಸರ್ಜಾ. ಎಷ್ಟು ಮುದ್ದಾಗಿದೆ ಗೊತ್ತಾ ಚಿತ್ರಗಳು.

ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳು ತಮ್ಮ ಪರ್ಸನಲ್ ಜೀವನದ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಅದು ಉತ್ತಮವಾದ ವಿಚಾರವು ಆಗಿರಬಹುದು ಅಥವಾ ಕೆಲವೊಮ್ಮೆ ಅದು ವಿ’ವಾದಾತ್ಮಕ ರೀತಿಯಲ್ಲಿಯೂ ಬದಲಾಗಬಹುದು. ಆದರೆ ಹೆಚ್ಚಾಗಿ ಸೆಲೆಬ್ರಿಟಿಗಳು ಯಾವುದೇ ರೀತಿಯ ವಿವಾದಗಳನ್ನು ಮಾಡಿಕೊಳ್ಳಲು ಹಿಂಜರಿಯುತ್ತಾರೆ.

ಆದಷ್ಟು ತಮ್ಮ ಜೀವನದಲ್ಲಿ ಪಾಸಿಟಿವ್ ವೈಬ್ರೇಶನ್ ಗಳನ್ನು ಇಟ್ಟುಕೊಳ್ಳಲು ಬಯಸುತ್ತಾರೆ. ಹಾಗೆಯೇ ತಮ್ಮ ಸುತ್ತಮುತ್ತಲಿನ ಜನರು ಕೂಡ ಸಂತೋಷವಾಗಿ ಇರಬೇಕೆಂದು ಬಯಸುತ್ತಾರೆ. ಖ್ಯಾತ ನಟಿ ಮೇಘನಾ ರಾಜ್ ಅವರು ಕೆಲವು ತಿಂಗಳುಗಳ ಹಿಂದೆ ತಾಯಿಯಾಗಿರುವ ವಿಷಯ ನಮಗೆಲ್ಲ ಗೊತ್ತೇ ಇದೆ.

ತಾಯಿಯಾದ ನಂತರ ಕುಟುಂಬದಲ್ಲಿ ಕರೋನವೈರಸ್ ಸಹ ಕಾಣಿಸಿಕೊಂಡಿತ್ತು. ಆದರೆ ಭಯ ಬೇಡ ನಾನು ನನ್ನ ಪತ್ನಿ ಹಾಗೂ ಮೇಘನ ಅತ್ತಿಗೆ ಎಲ್ಲರೂ ಕ್ಷೇಮವಾಗಿದ್ದೇವೆ ಎಂದು ಧ್ರುವ ಸರ್ಜಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಕೆಲವರು ಮೇಘನಾ ಅವರ ಬಗ್ಗೆ ಲೇಖನಗಳು ಬಂದರೆ ಅವರ ಪರ್ಸನಲ್ ಜೀವನಕ್ಕೂ ಕೊಂಚ ಬಿಡುವು ನೀಡಿ ಎಂದು ಕಮೆಂಟ್ ಮಾಡಿದರೆ ಮತ್ತೆ ಕೆಲವರು ತಮ್ಮ ನೆಚ್ಚಿನ ನಾಯಕ ನಟಿಯ ಬಗ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಭಾವನಾತ್ಮಕವಾದ ಬಂಧನವನ್ನು ಬೆಳೆಸಿಕೊಳ್ಳುತ್ತಾರೆ. ಹಾಗೂ ಅವರು ಏನೇ ಮಾಡಿದರೂ ಅದನ್ನು ನಾವು ಮಾಡಬೇಕೆಂಬ ಬಯಕೆ ಅವರ ಮನಸ್ಸಿನಲ್ಲಿ ಇರುತ್ತದೆ.

ಹಾಗೆಯೇ ಇಂದು ಎಲ್ಲೆಡೆ ಪಲ್ಸ್ ಪೋಲಿಯೊ ಲಸಿಕೆಯನ್ನು ಹಾಕಲಾಗುತ್ತಿದೆ. ಹಾಗೆಯೇ ಮೇಘನಾ ಚಿರಂಜೀವಿ ಸರ್ಜಾ ಅವರ ಮನೆಯಲ್ಲಿಯೂ ಕೂಡ ವೈದ್ಯರನ್ನು ಕರೆಸಿ ಪೋಲಿಯೋ ಡ್ರಾಪ್ಸ್ ಅನ್ನು ಪುಟ್ಟ ಚಿರು’ವಿಗೆ ಹಾಕಲಾಗಿದೆ. ನನ್ನ ಮುದ್ದು ಮಗುವಿನ ಪುಟ್ಟ ಬೆರಳುಗಳು ಶಾಹಿಯಿಂದ ಮುದ್ರಿತವಾಗಿವೆ.

ಕೆಲವೇ ಕೆಲವು ಹನಿಗಳು ನಿಮ್ಮ ಮಕ್ಕಳ ಆರೋಗ್ಯವನ್ನು ಸುರಕ್ಷಿತವಾಗಿರುತ್ತವೆ ಹಾಗೂ ದೇಶವನ್ನು ಪೋ’ಲಿಯೊ ಕಾ’ಯಿಲೆಯಿಂದ ದೂರವಾಗುತ್ತವೆ. ಎಲ್ಲರೂ ಆರೋಗ್ಯವಾಗಿರಿ ಹಾಗೂ ಸುರಕ್ಷಿತವಾಗಿರಿ, ಎಂದು ಪೋ’ಲಿಯೋ ಲಸಿಕೆ ಹಾಕುತ್ತಿರುವ ಚಿತ್ರವನ್ನು ಹಂಚಿಕೊಂಡು ಮೇಘನ ಅವರು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸುತ್ತಿರುವ ಅವರ ಅಭಿಮಾನಿಗಳು ಎಲ್ಲೆಡೆ ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಪುಟ್ಟ ಚಿರುವಿನ ಮುಖ ಅರ್ಧದಷ್ಟು ಕಾಣಿಸುತ್ತಿದೆ ಹಾಗೆಯೇ ಅವರ ಮಗುವಿನ ಬೆರಳಿಗೆ ಶಾಹಿ ಹಾಕಿರುವ ಚಿತ್ರವಂತೂ ಬಹಳ ಮುದ್ದಾಗಿದೆ.

One thought on “ಪೋ’ಲಿಯೋ ಲಸಿಕೆ ಹಾಕಿಸಿ ಮುದ್ದಾದ ಚಿತ್ರ ಹಂಚಿಕೊಂಡ ಮೇಘನಾ ಸರ್ಜಾ. ಎಷ್ಟು ಮುದ್ದಾಗಿದೆ ಗೊತ್ತಾ ಚಿತ್ರಗಳು.

  • My brother recommended I might like this website. He was totally right.
    This post truly made my day. You can not imagine simply how much time I had spent
    for this info! Thanks!

    Reply

Leave a Reply

Your email address will not be published. Required fields are marked *