ಆಧ್ಯಾತ್ಮಿಕ ಮಾಹಿತಿ

ನೀವು ಮಾಡುವ ಈ ಎಲ್ಲಾ ತಪ್ಪುಗಳ ಪರಿಣಾಮ ತಿಳಿದಾಗ ನೀವು ನಿಜಕ್ಕೂ ಹೆದರುತ್ತೀರ.

ನಮ್ಮ ಜೀವನದಲ್ಲಿ ದೀಪಗಳ ಮಹತ್ವ ಎಲ್ಲರಿಗೂ ತಿಳಿದೇ ಇದೆ. ಪ್ರತಿನಿತ್ಯ ಮುಂಜಾನೆ ಹಾಗೂ ಸಂಧ್ಯಾ ವೇಳೆಯಲ್ಲಿ ದೀಪಗಳನ್ನು ದೇವರ ಮುಂದೆ ಬೆಳಗುವ ರೂಢಿ ಇದೆ. ದೀಪಗಳನ್ನು ಹಚ್ಚುವುದರಿಂದ ನಮ್ಮ ಜೀವನದಲ್ಲಿ ಆಗುವ ಬದಲಾವಣೆಗಳೇನು ಹಾಗೂ ಅದರ ಪರಿಣಾಮಗಳೇನು ಎಂದು ನಾವು ತಿಳಿದುಕೊಳ್ಳೋಣ. ಪ್ರತಿನಿತ್ಯ ದೀಪವನ್ನು ಹಚ್ಚುವುದರಿಂದ ನಮ್ಮ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಸಿಗುವುದು. ದೀಪಗಳಲ್ಲಿ ಹಲವಾರು ವಿಧಗಳಿವೆ. ಇಂದು ನಾವು ಪರ್ಣ ದೀಪದ ಬಗ್ಗೆ ವಿಸ್ತಾರವಾಗಿ ತಿಳಿದುಕೊಳ್ಳೋಣ. ಪೂರ್ಣ ದೀಪ ಎಂದರೆ ಎಲೆಗಳಿಂದ ದೀಪಹಚ್ಚಿ ನೀರಿನಲ್ಲಿ ಅಥವಾ ನದಿಯಲ್ಲಿ ಬಿಡುವುದು.

ಎಲೆಗಳಿಂದ ದೀಪ ಹಚ್ಚುವಾಗ ಬಹಳ ಎಚ್ಚರಿಕೆಯಿಂದ ಇರಬೇಕು, ಈ ಕೆಳಕಂಡ ಎಲೆಗಳ ದೀಪಗಳನ್ನು ಕಡ್ಡಾಯವಾಗಿ ಎಂದಿಗೂ ಹಚ್ಚಬಾರದು. ವಿಳೆದೆಲೆ ಮೇಲೆ ಕರ್ಪೂರ ಅಥವಾ ತುಪ್ಪದ ಬತ್ತಿಗಳನ್ನು ಹಚ್ಚಿ ನದಿಯಲ್ಲಿ ಬಿಟ್ಟರೆ ದೀಪ ಹಚ್ಚಿದವರಿಗೆ ಮತ್ತು ಅವರ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತದೆ. ಅಶ್ವತ್ಥ ಮರದ ಎಲೆಗಳಲ್ಲಿ ದೀಪ ಹಚ್ಚಿ ನದಿಯಲ್ಲಿ ಬಿಟ್ಟರೆ ತ್ರಿಮೂರ್ತಿಗಳ ಶಾಪಕ್ಕೆ ಗುರಿಯಾಗುತ್ತಾರೆ ಹಾಗೂ ಮಹಾಲಕ್ಷ್ಮಿ ಶಾಪಕ್ಕೆ ಗುರಿಯಾಗುತ್ತಾರೆ. ಮಹಾಲಕ್ಷ್ಮಿಯು ಶಾಪವನ್ನು ಕೊಟ್ಟುಬಿಡುತ್ತಾಳೆ.

ಔದುಂಬರ ಮರದ ಎಲೆಗಳಲ್ಲಿ ದೀಪವನ್ನು ಹಚ್ಚಿದರೆ ಗುರುಗಳ ಹಾಗೂ ಶ್ರೀ ಲಕ್ಷ್ಮಿ ನರಸಿಂಹ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ಅರಳಿಮರದ ಎಲೆಗಳಲ್ಲಿ ದೀಪ ಹಚ್ಚಿದರೆ ಸಂತಾನ ಹಾಗೂ ವಂಶ ವೃದ್ಧಿಯಾಗುವುದಿಲ್ಲ. ಬಿಲ್ವಪತ್ರೆಯ ಮರದ ಎಲೆಗಳಲ್ಲಿ ದೀಪ ಹಚ್ಚಿ ನದಿಯಲ್ಲಿ ಬಿಟ್ಟರೆ ಪಾರ್ವತಿ ಹಾಗೂ ಮಹಾಲಕ್ಷ್ಮಿ ಶಾಪಕ್ಕೆ ಗುರಿಯಾಗುತ್ತಾರೆ. ಆದ್ದರಿಂದ ನದಿಯಲ್ಲಿ ಪರ್ಣ ದೀಪ ಹಚ್ಚುವವರು ಈ ಮೇಲೆ ತಿಳಿಸಿದ ಪರ್ಣಗಳನ್ನು ಅಥವಾ ಎಲೆಗಳನ್ನು ಬಿಟ್ಟು ಬೇರೆ ಮರದ ಎಲೆಗಳನ್ನು ಉಪಯೋಗಿಸಿ ದೀಪ ಹಚ್ಚಿದರೆ ಎಲ್ಲರಿಗೂ ಒಳಿತು.

ಈ ಒಂದು ತಪ್ಪನ್ನು ಎಂದಿಗೂ ಮಾಡಬೇಡಿ. ಈ ದೀಪಕ್ಕೆ ನಾರಿಕೇಳ ದೀಪ ಎಂದು ಕರೆಯುತ್ತಾರೆ . ಈ ದೀಪವನ್ನು ಹೆಚ್ಚಾಗಿ ತೆಂಗಿನಕಾಯಿಯಲ್ಲಿ ಕರ್ಪೂರ ಹಚ್ಚಿ ಅಥವಾ ತುಪ್ಪದ ದೀಪಗಳನ್ನು ಹಚ್ಚುತ್ತಾರೆ. ನಂತರ ತೆಂಗಿನಕಾಯಿಯನ್ನು ದೃ’ಷ್ಟಿಯ ಮುಖಾಂತರ ಒಡೆಯುತ್ತಾರೆ. ಈ ರೀತಿ ಮಾಡುವುದರಿಂದ ಮನಸ್ಸಿಗೆ ಅಸಮಾಧಾನ ಹಾಗೂ ದಿನೇದಿನೇ ತಾಪತ್ರಯಕ್ಕೆ ಸಿಲುಕುವುದು ಖಂಡಿತ. ಆದ್ದರಿಂದ ಈ ರೀತಿಯ ದೀಪ ಎಂದಿಗೂ ಹಚ್ಚಬಾರದು.ಒಟ್ಟಿನಲ್ಲಿ ತೆಂಗಿನಕಾಯಿಯ ಮೇಲೆ ಯಾವ ದೀಪವನ್ನು ಕೂಡ ಹಚ್ಚಲೇಬಾರದು.

ತೆಂಗಿನಕಾಯಿಯಲ್ಲಿರುವ ಕೊಬ್ಬರಿಯ ಮೇಲೆ ಕರ್ಪೂರ ಹಚ್ಚಿ ತಮ್ಮ ಶಕ್ತಿ ದೇವತೆಗಳಿಗೆ ಅಥವಾ ಶುದ್ಧ ದೇವತೆಗಳಿಗೆ ಯಾರು ದೀಪಗಳನ್ನು ಹಚ್ಚುತ್ತಾರೋ, ಅವರು ನಿತ್ಯವೂ ದಾರಿದ್ರ್ಯ ಮತ್ತು ಅಲೆಮಾರಿ ಜೀವನವನ್ನು ಅನುಭವಿಸುತ್ತಾರೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ಕೆಲಸ ಅಲ್ಲವೇ, ಹಾಗೆಯೇ ಮರೆಯದೆ ನಮ್ಮ ಪೇಜ್’ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್’ಗಳನ್ನು ಪ್ರತಿದಿನ ಪಡೆದುಕೊಳ್ಳಿ.

One thought on “ನೀವು ಮಾಡುವ ಈ ಎಲ್ಲಾ ತಪ್ಪುಗಳ ಪರಿಣಾಮ ತಿಳಿದಾಗ ನೀವು ನಿಜಕ್ಕೂ ಹೆದರುತ್ತೀರ.

  • Srikanta S kashyap

    Awesome

    Reply

Leave a Reply

Your email address will not be published. Required fields are marked *