ಗುಡ್ ನ್ಯೂಸ್ ಕೊಡುತ್ತೇನೆ ಎಂದ ಮೇಘನಾ ರಾಜ್. ಇಂದು ರಾತ್ರಿ 12 ಗಂಟೆಗೆ ಸರಿಯಾಗಿ ಗುಡ್ ನ್ಯೂಸ್.
ಮೇಘನಾ ಚಿರು ಸರ್ಜಾ ಅವರು ಫೆಬ್ರವರಿ 12ನೇ ತಾರೀಕು 9 ಗಂಟೆಗೆ ಸರಿಯಾಗಿ ಒಂದು ಗುಡ್ ನ್ಯೂಸ್ ಅನ್ನು ನೀಡುತ್ತೇನೆ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದರು. ಇದನ್ನು ನೋಡಿದ ಅವರ ಅಭಿಮಾನಿಗಳೆಲ್ಲ ಬಹಳ ಕಾತುರದಿಂದ ಕಾಯುತ್ತಿದ್ದರು. ಏನಿರಬಹುದು ಸರ್ಪ್ರೈಸ್ ಎಂದು ಎಲ್ಲರೂ ಯೋಚಿಸುತ್ತಿದ್ದರು.
ಇಂದು ಬೆಳಗ್ಗೆ 9 ಗಂಟೆಗೆ ಸರಿಯಾಗಿ ಮೇಘನಾ ರಾಜ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಅನ್ನು ಹಾಕಿಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಈ ಗುಡ್ ನ್ಯೂಸ್ ಏನು ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಊಹಾಪೋಹಗಳು ಹರಿದಾಡುತ್ತಿದ್ದವು. ಕೆಲವರು ಮಗುವಿನ ಫೋಟೋ ಹಾಕಬಹುದು ಎಂಬ ಊಹೆಯಲ್ಲಿ ಇದ್ದರೆ, ಇನ್ನು ಕೆಲವರು ಮಗುವಿಗೆ ನಾಮಕರಣ ಮಾಡುತ್ತಿದ್ದಾರೆ ಎಂಬ ಊಹೆಯಲ್ಲಿ ಇದ್ದರು.
ಒಟ್ಟಿನಲ್ಲಿ ಎಲ್ಲರೂ ಅದೇನು ಎಂಬುದನ್ನು ಮೇಘನಾ ರವರ ಬಾಯಿಂದಲೇ ಕೇಳಬೇಕೆಂಬ ಕುತೂಹಲದಿಂದ ಆ ಕ್ಷಣಕ್ಕಾಗಿ ಕಾಯುತ್ತಿದ್ದರು. ಅವರು ಇಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅದೇನು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆ ಗುಡ್ ನ್ಯೂಸ್ ಏನು ಎಂದು ಅವರು ಅದರಲ್ಲಿ ತಿಳಿಸಿದ್ದಾರೆ. ಅದೇನು ಅಂತ ಯೋಚಿಸುತ್ತಿದ್ದೀರಾ. ಮೇಘನಾ ಚಿರು ಸರ್ಜಾ ರವರು ತಮ್ಮ ಮಗನಾದ ಜೂನಿಯರ್ ಚಿರು ಸರ್ಜಾ ರವರ ಫೋಟೋ ಗಳನ್ನು ಎಲ್ಲರ ಜೊತೆ ಹಂಚಿಕೊಳ್ಳಲಿದ್ದಾರೆ.
ಜೂನಿಯರ್ ಚಿರು ಸರ್ಜಾ ಅವರು ನೋಡಲು ಹೇಗಿರಬಹುದು ಎಂಬ ಅವರ ಎಲ್ಲಾ ಅಭಿಮಾನಿಗಳ ಕುತೂಹಲ ಇಂದು ಕೊನೆಯಾಗಲಿದೆ. ನಾವು ಇಂದು ಜೂನಿಯರ್ ಚಿರು ಸರ್ಜಾ ರವರನ್ನು ಮೊದಲಬಾರಿಗೆ ನೋಡಬಹುದು ಎಂಬ ಖುಷಿಯಲ್ಲಿ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಕ್ಲಾಸಿಕ್ ಕ್ಯಾಪ್ಚರ್ ಅವರ ಅಫೀಷಿಯಲ್ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಜೂನಿಯರ್ ಚಿರು ಸರ್ಜಾ ರವರ ಫೋಟೋಗಳು ಇನ್ನೇನು ಕೆಲವೇ ಕ್ಷಣಗಳಲ್ಲಿ ಬರಲಿವೆ. ಇಂದೇ ಮಧ್ಯರಾತ್ರಿ ಸರಿಯಾಗಿ ೧೨ ಗಂಟೆಗೆ ನನಗೂ ಹಾಗೂ ಚಿರು ಅವರಿಗೂ ಒಂದು ಮರೆಯಲಾಗದ ಕ್ಷಣ ಎಂದೇ ಹೇಳಬಹುದು ಅದೇನೆಂದರೆ ನನ್ನ ಪುಟ್ಟ ಪ್ರಪಂಚ (ನಮ್ಮ ಜೂನಿಯರ್ ಚಿರು ) ಅನ್ನು ಇಡೀ ಪ್ರಪಂಚಕ್ಕೆ ತೋರಿಸುವ ಕ್ಷಣ.
ನಾವು ಬಹಳ ಕಾತುರರಾಗಿದ್ದೇವೆ. ನೀವು ಸಹ ಬಹಳ ಕಾತುರರಾಗಿ ಕಾಯುತ್ತಿದ್ದೀರಿ ಎಂದು ನಮಗೆಲ್ಲ ತಿಳಿದಿದೆ. ಇಂತಿ ನಿಮ್ಮ ಪ್ರೀತಿಯ ಮೇಘನಾ ಎಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇದೇ ರೀತಿಯ ಅಪ್ಡೇಟ್ಗಳನ್ನು ಪ್ರತಿದಿನ ಪಡೆಯಿರಿ.