ರಾತ್ರಿ ಹೊತ್ತು ಮೊಸರು ತಿನ್ನುವುದು ಒಳ್ಳೆಯದೇ, ಇಲ್ನೋಡಿ.
ರಾತ್ರಿ ಹೊತ್ತು ಮೊಸರು ತಿನ್ನುವುದು ಒಳ್ಳೆಯದೇ? ಇಲ್ನೋಡಿ. ಮೊಸರನ್ನು ರಾತ್ರಿ ವೇಳೆ ಸೇವಿಸಬಾರದೆಂದು ಕೆಲವರು ಹೇಳುತ್ತಾರೆ. ಅದು ನಿಜವೇ. ಬನ್ನಿ ತಿಳಿಯೋಣ. ಆಯುರ್ವೇದದ ಪ್ರಕಾರ ಮೊಸರು ಹುಳಿ ಮತ್ತು ಸಿಹಿಯಿಂದ ಕೂಡಿರುವುದರಿಂದ ದೇಹದಲ್ಲಿ ‘ಕಫ ದೋಷ’ವನ್ನುಂಟು ಮಾಡುತ್ತದೆ. ಸಾಮಾನ್ಯವಾಗಿ ರಾತ್ರಿ ಹೊತ್ತು ನಮ್ಮ ದೇಹದಲ್ಲಿ ಕಫದ ಪ್ರಮಾಣ ಅಧಿಕವಾಗಿರುತ್ತದೆ.
ಹಾಗಾಗಿ ರಾತ್ರಿ ವೇಳೆ ಮತ್ತೆ ಮೊಸರು ಸೇವಿಸಿದರೆ ಕಫ ಹೆಚ್ಚಾಗಿ ಮೂಗಿನ ನಾಳಗಳಲ್ಲಿ ಲೋಳೆ ಅಥವಾ ಸಿಂ’ಬಳ ಜಾಸ್ತಿ ಆಗುವ ಸಾಧ್ಯತೆಗಳಿವೆ. ಹಾಗಾದರೆ ರಾತ್ರಿ ಮೊಸರು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆ. ರಾತ್ರಿ ಮೊಸರು ತಿನ್ನುವುದರಿಂದ ಯಾವುದೇ ಸಮಸ್ಯೆಗಳಿಲ್ಲ. ಆದರೆ ಕಫ, ಅಸ್ತಮಾ ಸಮಸ್ಯೆ ಇರುವವರು ಮಾತ್ರ ರಾತ್ರಿ ವೇಳೆ ಮೊಸರು ತಿನ್ನದಿದ್ದರೆ ಒಳಿತು.
ಯಾಕೆಂದರೆ ಅವರಲ್ಲಿ ಕಫ ಜಾಸ್ತಿಯಾಗಿ ಅನಾರೋಗ್ಯ ಕಾಡಬಹುದು. ರಾತ್ರಿ ಜೀರ್ಣಕ್ರೀಯೆ ಉತ್ತಮವಾಗಬೇಕಾದರೆ ಮಜ್ಜಿಗೆ ಅಥವಾ ಪುದೀನಾ ಮತ್ತು ಜೀರಿಗೆ ಸೇರಿಸಿದ ಮೊಸರು ಸೇವಿಸಬಹುದು. ಮಂತ್ಯೆ ಕಾಳುಗಳನ್ನು ಸೇರಿಸಿದರೂ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
ಯಾವುದೇ ಕಫ ಸಮಸ್ಯೆ ಇಲ್ಲದವರು ರಾತ್ರಿ ಹೊತ್ತು ಕೂಡ ಮೊಸರು ಸೇವಿಸಬಹುದು. ಇಲ್ಲವಾದರೆ ಮೊಸರಿನ ಬದಲು ಮಜ್ಜಿಗೆ ಬಳಸುವುದರಿಂದ ಜೀರ್ಣಕ್ರಿಯೆಯೂ ಉತ್ತಮವಾಗುತ್ತದೆ ಮತ್ತು ಕಫ ಸಮಸ್ಯೆಯೂ ನಿವಾರಣೆಯಾಗುತ್ತದೆ. ಧೂಳಿನ ಅಲರ್ಜಿ ಇರುವವರು ರಾತ್ರಿ ಹೊತ್ತು ಮೊಸರು ನೇರವಾಗಿ ಅಥವಾ ಬೇರೆ ಯಾವುದೇ ಖಾದ್ಯದ ರೂಪದಲ್ಲಿ ಸೇವಿಸಲೇಬಾರದು.
ಈ ಸಮಸ್ಯೆಯಿರುವವರು ರಾತ್ರಿ ಮೊಸರು ತಿಂದರೆ ಉಸಿರಾಟದ ತೊಂದರೆ ಉಂಟಾಗಿ, ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.