ನಿಮ್ಮ ಮೊಣಕೈ ಕಪ್ಪಾಗಿದೆಯೇ ಹಾಗಾದರೆ ಇದನ್ನು ಒಮ್ಮೆ ಮಾಡಿ ನೋಡಿ. ಥಟ್ಟನೆ ನಿಮ್ಮ ಸಮಸ್ಯೆ ಪರಿಹಾರವಾಗಲಿದೆ.
ನಿಮ್ಮ ಮೊಣಕೈ ಕಪ್ಪಾಗಿದೆಯೇ ಹಾಗಾದರೆ ಇದನ್ನು ಒಮ್ಮೆ ಮಾಡಿ ನೋಡಿ. ಸಾಮಾನ್ಯವಾಗಿ ಹೆಚ್ಚಿನವರ ಮೊಣಕೈ ಹಾಗೂ ಮೊಣಕಾಲು ಕಪ್ಪಾಗಿರುತ್ತದೆ. ಮಗುವಾಗಿದ್ದಾಗ ನೆಲದಮೇಲೆ ತೆವಳಲು ಎಲ್ಲರೂ ಮೊಣಕೈ ಹಾಗೂ ಮೊಣಕಾಲನ್ನು ಬಳಸುತ್ತೇವೆ. ಅಂದರೆ ನೆಲಕ್ಕೆ ನಮ್ಮ ಮೂಲ ಕೈಯಾಗ ಮೊಣಕಾಲನ್ನು ಮುಚ್ಚುವುದರಿಂದ ಭಾಗ ಜಡ್ಡುಗಟ್ಟಿ ಕಪ್ಪಾಗುತ್ತದೆ.
ಹೆಚ್ಚಿನವರು ದೇಹದ ಎಲ್ಲಾ ಭಾಗದ ಸೌಂದರ್ಯಕ್ಕೆ ಗಮನ ನೀಡಿದರು ಮೊಣಕೈ ಹಾಗೂ ಮೊಣಕಾಲನ್ನು ನಿರ್ಲಕ್ಷಿಸುತ್ತಾರೆ. ಅವರು ನಮ್ಮ ಸೌಂದರ್ಯವನ್ನು ಸ್ವಲ್ಪ ಮಟ್ಟಿಗೆ ಆದರೂ ಕೆಡಿಸಬಹುದು. ಸುಂದರ ಡ್ರೆಸ್ ತೊಟ್ಟಾಗ ಇದು ಸೌಂದರ್ಯಕ್ಕೆ ಕಪ್ಪುಚುಕ್ಕಿ ಎಂದಾಗುತ್ತದೆ. ಅನೇಕರು ಇದೇ ಕಾರಣಕ್ಕೆ ಶಾರ್ಟ್ಸ್, ಸ್ಕರ್ಟ್ಸ್ ಹಾಕುವುದಿಲ್ಲ.
ಮತ್ತು ಫುಲ್ ಸ್ಲೀವ್ ಇರುವ ಡ್ರೆಸ್ ಇಷ್ಟಪಡುತ್ತಾರೆ. ಮೊಣಕೈ ಹಾಗೂ ಮೊಣಕಾಲು ಕಪ್ಪಾಗಿದೆ ಎನ್ನುವ ಕಾರಣಕ್ಕೆ ಮುಜುಗರ ಪಟ್ಟುಕೊಳ್ಳಬೇಕಾಗಿಲ್ಲ. ಮನೆಮದ್ದಿನ ಮೂಲಕ ಕೆಲವೇ ದಿನಗಳಲ್ಲಿ ಮೊಣಕೈ ಹಾಗೂ ಮೊಣಕಾಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.
ಸೌತೆಕಾಯಿಯ ಮೂರರಿಂದ ನಾಲ್ಕು ಚೂರುಗಳನ್ನು ತೆಗೆದುಕೊಳ್ಳಿ. ಅದನ್ನು ಮೊಣಕೈ ಹಾಗೂ ಮೊಣಕಾಲಿಗೆ ಹಾಕಿ ಹತ್ತರಿಂದ ಹದಿನೈದು ನಿಮಿಷ ಸರಿಯಾಗಿ ಉಜ್ಜಿ. ಐದು ನಿಮಿಷ ಬಿಟ್ಟು ತಣ್ಣನೆಯ ನೀರಿನಲ್ಲಿ ತೊಳೆಯಿರಿ. ಇದನ್ನು ವಾರಕ್ಕೆ ಎರಡು ಅಥವಾ ಒಂದು ಬಾರಿಯಾದರೂ ಮಾಡಿ ನೋಡಿ. ಸ್ವಲ್ಪ ದಿನಗಳಲ್ಲಿ ನಿಮಗೆ ವ್ಯತ್ಯಾಸ ಕಾಣಲು ಶುರುವಾಗುತ್ತದೆ.
ಮತ್ತೊಂದು ಎಫೆಕ್ಟಿವ್ ಎಂದರೆ ಒಂದು ಬಟ್ಟಲಿಗೆ ಅಡುಗೆ ಸೋಡಾ ಹಾಕಿ. ಅದಕ್ಕೆ ಸ್ವಲ್ಪ ಹಾಲನ್ನು ಹಾಕಿ. ಇದನ್ನು ಮೊಣಕೈ ಹಾಗೂ ಮೊಣಕಾಲಿನ ಕಪ್ಪು ಕಲೆಗೆ ಹಾಕಿ ಮೃದುವಾಗಿ ಉಜ್ಜಿ. ಇದನ್ನು ತೊಳೆದ ನಂತರ ಎರಡು ಚಮಚ ಈರುಳ್ಳಿ, ಎರಡು ಚಮಚ ನಿಂಬೆರಸ, ಅರ್ಧ ಚಮಚ ಜೇನುತುಪ್ಪ ಹಾಗೂ ಒಂದು ಚಮಚ ಕಡಲೆ ಹಿಟ್ಟನ್ನು ಮಿಕ್ಸ್ ಮಾಡಿ ಅದನ್ನು ಮೊಣಕೈ ಹಾಗೂ ಮೊಣಕಾಲಿಗೆ ಹಚ್ಚಿ.
ಇದನ್ನು ಮೂರು ನಾಲ್ಕು ದಿನ ಟ್ರೈ ಮಾಡಿ ಸುಂದರ ಮೊಣಕೈ ಮೊಣಕಾಲು ನಿಮ್ಮದಾಗುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ,