Featuredಆರೋಗ್ಯ ಮಾಹಿತಿಉಪಯುಕ್ತ ಮಾಹಿತಿ

ಮುಖಕವಚ ಮೂಗಿನ ಕೆಳಗೆ ಧರಿಸುವವರು ಇದನ್ನು ಒಮ್ಮೆ ಓದಿ. ನೀವು ಮಾಡುತ್ತಿರುವ ದೊಡ್ಡ ತಪ್ಪು ಏನೆಂದು ಅರ್ಥವಾಗುತ್ತದೆ.

ನಾವು ಮುಖಕವಚ ಏಕೆ ಧರಿಸಬೇಕು? 1. ಸಾರ್ವಜನಿಕ ಸ್ಥಳಗಳಲ್ಲಿ ಯಾರಿಗೆ ಕೋವಿಡ್ ಬಂದಿದೆ, ಯಾರಿಗೆ ಕೋವಿಡ್ ಬಂದಿಲ್ಲ ಮತ್ತು ಯಾರಿಗೆ ಕೋವಿಡ್ ಲಸಿಕೆಯಾಗಿದೆ, ಆಗಿಲ್ಲ ಎಂದು ಎಲ್ಲರಿಗೂ ಗೊತ್ತಾಗುವುದಿಲ್ಲ. ಆದ್ದರಿಂದ ಸಾರ್ವತ್ರಿಕ ಮಾಸ್ಕ್ ಕೊರೋನಾ ರೋಗದ ಸೋಂಕನ್ನು ತಡೆಯಲು ಸಹಾಯಮಾಡುತ್ತದೆ ಎಂದು ಪರಿಣಿತರು ಸಲಹೆ ಮಾಡಿದ್ದಾರೆ

2. ಒಬ್ಬ ವ್ಯಕ್ತಿ ನನಗೆ ಕೋವಿಡ್ ಬಂದುಹೋಗಿಯಾಗಿದೆ, ನಾನು ಮಾಸ್ಕ್ ಧರಿಸುವುದಿಲ್ಲ ಎಂದು ಹೇಳಿದಲ್ಲಿ ಆತ/ಆಕೆಗೆ ನಾವು ಪರವಾಗಿಲ್ಲ, ಮಾಸ್ಜ್ ಧರಿಸುವುದು ಬೇಡ ಎಂದು ಹೇಳಿ ಸಹಕರಿಸಿದಲ್ಲಿ ಅದೇ ರೀತಿ ಇನ್ನೂ ಹತ್ತೋ ನೂರೋ ಜನರು ನಮಗೂ ಕೋವಿಡ್ ಬಂದಾಗಿದೆ- ನಾವೂ ಮಾಸ್ಕ್ ಧರಿಸುವುದಿಲ್ಲ ಎಂದು ಹೇಳಿದಲ್ಲಿ, ಎಲ್ಲರಿಗೂ ಕೋವಿಡ್ ಬಂದು ಹೋಗಿದೆ ಎಂದು ಪರಿಶೀಲಿಸುವುದಾದರೂ ಹೇಗೆ.

3. ಒಮ್ಮೆ ಕೋವಿಡ್ ಬಂದವರಿಗೆ ಮತ್ತೊಮ್ಮೆ ಬರುವುದಿಲ್ಲ ಎನ್ನುವುದು ನೂರಕ್ಕೆ ನೂರು ನಿಜವಲ್ಲ. ಇದರ ಸಂಭವನೀಯತೆ ಕಮ್ಮಿ ಇದ್ದರೂ ಯಾರಿಗೆ ಮತ್ತೆ ಬರಬಹುದು, ಯಾರಿಗೆ ಬರಲಾರದು ಎಂದು ಹೇಳಲಿಕ್ಕೆ, ಊಹಿಸಲಿಕ್ಕೆ ನಮ್ಮಲ್ಲಿ ಪರಿಕರವಿಲ್ಲ.

4. ಕೋವಿಡ್ ಲಸಿಕೆ ತೀವ್ರತರವಾದ ಕೋವಿಡ್ ಬರುವುದನ್ನು ಮಾತ್ರ ತಡೆಗಟ್ಟುತ್ತದೆ. ಎಲ್ಲ ಪ್ರಮುಖ ಆರೋಗ್ಯ ಸಂಸ್ಥೆಗಳ ಮಾರ್ಗಸೂಚಿಗಳ ಪ್ರಕಾರ ಕೋವಿಡ್ ಲಸಿಕೆಯ ನಂತರ ಸಾರ್ವತ್ರಿಕ ಸುರಕ್ಷಾ ಕ್ರಮಗಳನ್ನು ಬಳಸುವುದು ಒಳ್ಳೆಯದು. ಮಾಸ್ಕ್ ಈ ಬಗೆಯ ಸುರಕ್ಷಾ ಕ್ರಮ.

5. ನಮಗೆ ಕೋವಿಡ್ ಬಂದಿರಲಿ ಅಥವಾ ನಾವು ಕೋವಿಡ್ ಲಸಿಕೆ ತೆಗೆದುಕೊಂಡಿರಲಿ, ನಾವು ಸೋಂಕನ್ನು ಇನ್ನೊಬ್ಬರಿಗೆ ಹರಡುತ್ತೀವೋ ಇಲ್ಲವೋ ಅನ್ನುವುದು ಇನ್ನೂ ವಿವಾದಾಸ್ಪದ ವಿಷಯ. ಈ ಸೋಂಕನ್ನು ಇನ್ನೊಬ್ಬರಿಗೆ ಹರಡುವ ಪ್ರಮಾಣ ಕಮ್ಮಿಯಿರಬಹುದು. ಆದರೆ, ಯಾರಿಂದ ಯಾರಿಗೆ ಸೋಂಕು ಹರಡುತ್ತದೆ ಎಂದು ಹೇಳಲಾಗುವುದಿಲ್ಲ.

6. ಮಾಸ್ಕ್ ಧರಿಸಬೇಕೇ ಬೇಡವೇ ಅನ್ನುವುದು ಈ ಪ್ಯಾಂಡೆಮಿಕ್ ಶುರುವಾದಾಗಿನಿಂದ ಬಹುಚರ್ಚೆಗೆ ಒಳಗಾದ ವಿಷಯ. ನಮಗೆ ಬೇಕಾದ ಹೈಪಾಥಿಸಿಸ್‍ಗೆ ತಕ್ಕಹಾಗೆ ವೈದ್ಯಕೀಯ ಜರ್ನಲುಗಳು ಪೂರಕವಾದ ಸಾಕ್ಷಿಯನ್ನು ಒದಗಿಸಬಹುದು. ಇಂಥ ಸಮಯದಲ್ಲಿ ನಮಗಿರುವ ಆಧಾರ ಪರಿಣಿತ ಸಮಿತಿಗಳು ಆಗಾಗ್ಗೆ ಒದಗಿಸುವ ಮಾರ್ಗಸೂಚಿಗಳು. ಈ ಎಲ್ಲ ಮಾರ್ಗಸೂಚಿಗಳನ್ನು ನಾವು ಆದಷ್ಟೂ ಅನುಸರಿಸಲು ಪ್ರಯತ್ನ ಪಡಬೇಕು ಎಂದು ನಮ್ಮ ಅನಿಸಿಕೆ.

7. ಅಮೆರಿಕಾದಲ್ಲಿ ಮಾಸ್ಕ್ ಕಡ್ಡಾಯವನ್ನು ಸಡಿಲಗೊಳಿರಿಸುವುದು ಬಹಳಷ್ಟು ಜನಕ್ಕೆ ಕೋವಿಡ್ ಸೋಂಕು ತಗುಲಿದೆ ಹಾಗಾಗಿ ಅವರು ಸುರಕ್ಷಿತರು ಎಂಬ ಆಧಾರದ ಮೇಲೆ ಅಲ್ಲ. ಸಾಕಷ್ಟು ಜನ ಲಸಿಕೆ ತೆಗೆದುಕೊಂಡಿದ್ದಾರೆ ಎಂಬ ಅಂಶದಿಂದ. 8. ಮಾಸ್ಕ್ ಕಡ್ಡಾಯ ಸಡಿಲಗೊಂಡಿದ್ದರೂ ವೈದ್ಯಕೀಯ ಸಿಬ್ಬಂದಿ, ವಿಮಾನ ನಿಲ್ದಾಣ ಮತ್ತು ವಿಮಾನಗಳು, ಶಾಲೆಗಳು, ಜೈಲು, ನಿರಾಶ್ರಿತರ ತಾಣಗಳು ಇತರೇ ಜಾಗದಲ್ಲಿ ಇನ್ನೂ ಮಾಸ್ಕ್ ಹಾಕಬೇಕೆಂಬ ನಿಯಮವಿದೆ.

9. ಈ ಮಾಸ್ಕ್ ಕಡ್ಡಾಯ ಸಡಿಲಗೊಂಡದ್ದು ಅಮೆರಿಕಾದಲ್ಲಿ ನಡೆದ ಸಂಶೋಧನೆಗಳಿಂದ. ಅಂದರೆ ಫೈಜರ್ ಮತ್ತು ಮಡರ್ನಾ ಲಸಿಕೆ ತೆಗೆದುಕೊಂಡವರ ಮೇಲೆ ನಡೆದ ಸಂಶೋಧನೆಗಳಿಂದ. ಭಾರತದ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ತೆಗೆದುಕೊಂಡವರಿಗೆ ಈ ನಿಯಮ ಅನ್ವಯವಾಗುವುದಿಲ್ಲ.

10. ಆದ್ದರಿಂದ ಎಲ್ಲ ವೈಜ್ಞಾನಿಕ ವರದಿಗಳೂ, ನಿಮಗೆ ಕೋವಿಡ್ ಬಂದು ಗುಣವಾಗಿದ್ದರೂ, ಕೋವಿಡ್ ಲಸಿಕೆ ತೆಗೆದುಕೊಂಡಿದ್ದರೂ ನೀವು ಸಾರ್ವತ್ರಿಕ ಸುರಕ್ಷಾ ಕ್ರಮಗಳನ್ನು ಪಾಲಿಸಿ ಎಂದು ಹೇಳುತ್ತವೆ.

Leave a Reply

Your email address will not be published. Required fields are marked *