Featuredಆರೋಗ್ಯ ಮಾಹಿತಿಉಪಯುಕ್ತ ಮಾಹಿತಿ

ಈ ಮೇಕಪ್ ಉತ್ಪನ್ನಗಳನ್ನು ನೀವು ಹೆಚ್ಚು ಬಳಸುತ್ತಿದ್ದರೆ ಈಗಲೇ ಎ’ಚ್ಚೆತ್ತುಕೊಳ್ಳಿ.

ಮೇಕಪ್ ಗೆ ಏನನ್ನು ಅತಿಯಾಗಿ ಬಳಸಬಾರದು. ಮೇಕಪ್ ನಿಂದ ದೇಹದ ಸೌಂದರ್ಯ ಹೆಚ್ಚಾಗುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಪ್ರತಿನಿತ್ಯ ಮೇಕಪ್ ಬಳಸಿಕೊಂಡರೆ ಅದರಿಂದ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಕೆಲವೊಂದು ಮೇಕಪ್ ಉತ್ಪನ್ನಗಳನ್ನು ದಿನನಿತ್ಯ ಬಳಸಿದರೆ ಅದರಿಂದ ಕೆಟ್ಟ ಪರಿಣಾಮವು ಸಹ ಆಗಬಹುದು ಎಂದು ಹೇಳುತ್ತಾರೆ. ಅಂತಹ ಉತ್ಪನ್ನಗಳ ಬಗ್ಗೆ ಎಚ್ಚರ ವಹಿಸಲೇಬೇಕು.

ಮೊದಲನೆಯದಾಗಿ ಡ್ರೈ ಶಾಂಪು : ಕೂದಲನ್ನು ತೊಳೆಯಲು ಸಮಯ ಸಿಗದೇ ಇರುವಂತಹ ವೇಳೆಯಲ್ಲಿ ಹೆಚ್ಚಿನ ಮಹಿಳೆಯರು ಒಣ ಶಾಂಪೂ ಬಳಸುತ್ತಾರೆ. ಆದರೆ ಅತಿಯಾಗಿ ಇದನ್ನು ಬಳಸುವುದನ್ನು ನಿಲ್ಲಿಸಬೇಕು. ಇದರಿಂದ ಕೂದಲಿಗೆ ಹಾನಿಯಾಗಿ ಉದುರಲು ಪ್ರಾರಂಭವಾಗುತ್ತದೆ.

ಎರಡನೆಯದಾಗಿ ಕಂಡೀಶನರ್ : ಕೂದಲಿಗೆ ಆಳವಾದ ಕಂಡಿಷನರ್ ಹಾಕಿಕೊಳ್ಳುವುದರಿಂದ ಕೂದಲು ತುಂಬಾ ಆರೋಗ್ಯವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಇದನ್ನು ಅತಿಯಾಗಿ ಬಳಸುವ ಕಾರಣದಿಂದ ಕೂದಲು ತುಂಬಾ ಒಣಗುತ್ತದೆ ಮತ್ತು ತಲೆ ಬುರುಡೆಯಲ್ಲಿ ನೈಸರ್ಗಿಕ ಪಿ ಎಚ್ ಮಟ್ಟವು ಕಳೆದು ಹೋಗುತ್ತದೆ. ಹಾಗಾಗಿ ಕಂಡೀಷನರ್ ಅನ್ನು ಪ್ರತಿದಿನ ಬಳಸಲೇಬೇಡಿ.

ಮೂರನೆಯದಾಗಿ ಮೇಕಪ್ ಪ್ರೈಮರ್ : ಮೇಕಪ್ ಗೆ ಮುನ್ನ ಮುಖಕ್ಕೆ ಪ್ರೈಮರ್ ಬಳಸುವುದರಿಂದ ಮುಖದ ಕಾಂತಿಯು ಚೆನ್ನಾಗಿರುತ್ತದೆ. ಆದರೆ ಇದರಲ್ಲಿ ಇರುವ ಸಿಲಿಕಾನ್ ಚರ್ಮದಲ್ಲಿನ ರಂದ್ರಗಳನ್ನು ತೈಲದಿಂದ ತುಂಬಿಸುವುದು ರಿಂದ ಮೊಡವೆಗಳು ಉಂಟಾಗಬಹುದು. ಹಾಗಾಗಿ ಪ್ರೈಮರ್ ನ ಅತಿಯಾದ ಬಳಕೆ ಬೇಡ.

ವಾಟರ್ ಪ್ರೂಫ್ ಮಸ್ಕಾರ : ಇದು ಕಣ್ಣುಗಳಿಗೆ ಒಳ್ಳೆಯ ಹೊಳಪು ನೀಡುವುದರಲ್ಲಿ ಯಾವುದೇ ಸಂಶಯ ಇಲ್ಲ. ಆದರೆ ವಾಟರ್ ಪ್ರೂಫ್ ಮಸ್ಕರಾವನ್ನು ನಿಯಮಿತವಾಗಿ ಬಳಸದೇ ಇರುವುದರಿಂದ ಕಣ್ಣಿನ ರೆಪ್ಪೆಗಳು ಒಣಗಿ ಹೋಗಬಹುದು. ಹಾಗಾಗಿ ವಾಟರ್ ಪ್ರೂಫ್ ಮಸ್ಕಾರ ವನ್ನು ಪ್ರತಿನಿತ್ಯ ಬಳಸಲೇಬೇಡಿ.

ಟ್ಯಾನರ್ : ಪ್ರತಿಯೊಬ್ಬರಿಗೂ ಹೊಳೆಯುವ ಮೈಕಾಂತಿ ಬೇಕು ಎಂಬ ಆಸೆ ಇರುತ್ತದೆ. ಇದಕ್ಕಾಗಿ ಟ್ಯಾನರ್ ಬಳಸುತ್ತಾರೆ. ಆದರೆ ಇದನ್ನು ಪ್ರತಿನಿತ್ಯ ಬಳಸುವುದು ಚರ್ಮಕ್ಕೆ ಒಳ್ಳೆಯದಲ್ಲ. ಇದರಿಂದ ದೀರ್ಘಕಾಲದ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಹಾನರ್ ಪ್ರತಿನಿತ್ಯ ಬಳಸುವುದರಿಂದ ದೂರವಿರಬೇಕು.

ಮತ್ತಷ್ಟು ಬ್ಯೂಟಿ ಟಿಪ್ಸ್ ಗಳಿಗಾಗಿ ನಮ್ಮ ಪೇಜನ್ನು ಆಗಾಗ ವೀಕ್ಷಿಸಿ. ಇದನ್ನು ನಿಮ್ಮ ಸ್ನೇಹಿತರೊಂದಿಗೂ ಸಹ ಹಂಚಿಕೊಳ್ಳಿ

Leave a Reply

Your email address will not be published. Required fields are marked *