Featuredಅಂತರಾಷ್ಟ್ರೀಯ ಸುದ್ದಿಸಿನಿಮಾ ಮಾಹಿತಿಸುದ್ದಿ

ಮನಿಕೆ ಮಾಂಗೆ ಹಿತೆ ಹಾಡಿನ ಹುಡುಗಿಗೆ ವೇದಿಕೆಯ ಮೇಲೆಯೇ ಬಿತ್ತು ಏ’ಟು. ಯಾಕೆ ಗೊತ್ತಾ. ಏನಾಯಿತು ನೋಡಿ.

ಮನಿಕೆ ಮಾಂಗೆ ಹಿತೆ ಹಾಡಿನ ಹುಡುಗಿಗೆ ವೇದಿಕೆಯ ಮೇಲೆಯೇ ಬಿತ್ತು ಏ’ಟು. ಯಾಕೆ ಗೊತ್ತಾ, ಏನಾಯಿತು ನೋಡಿ. ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ವಿಡಿಯೋ ಅಥವಾ ಫೋಟೋಗಳು ವೈ’ರಲ್ ಆಗುತ್ತಲೇ ಇರುತ್ತದೆ. ಅದರಂತೆ ಶ್ರೀಲಂಕಾದ ಹುಡುಗಿಯೊಬ್ಬಳು ಹಾಡಿದ ಹಾಡನ್ನು ರಾತ್ರೋರಾತ್ರಿ ವೈ’ರಲ್ ಆಗಿ ಲಕ್ಷಾಂತರ ವ್ಯೂಸ್ ಪಡೆದುಕೊಂಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ.

ಮನಿಕೆ ಮಾಂಗೆ ಹಿತೆ ಎಂದು ಶ್ರೀಲಂಕಾದಲ್ಲಿ ಹಾಡಿ ಅಪ್ಲೋಡ್ ಆದ ಹಾಡೊಂದು ಕೇವಲ ಶ್ರೀಲಂಕಾಕಷ್ಟೇ ಸೀಮಿತವಲ್ಲದೆ ವಿಶ್ವದಾದ್ಯಂತ ವೈರಲ್ ಆಗಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದ್ದು ಅಚ್ಚರಿಯೇ ಸರಿ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡ ದೊಡ್ಡ ಸ್ಟಾರ್ ಗಳು ಈ ಹಾಡಿಗೆ ಹೆಜ್ಜೆ ಹಾಕಿದರು.

28 ವರ್ಷದ ಹುಡುಗಿ ಯೋಹನಿ ದಿಲೋಕ ದೆ ಸಿಲ್ವಾ ತಮ್ಮ ಯೂಟ್ಯೂಬ್ ಖಾತೆಯಲ್ಲಿ ಸಾಕಷ್ಟು ಹಾಡುಗಳನ್ನು ಸದಾ ಅಪ್ಲೋಡ್ ಮಾಡುತ್ತಲೇ ಇದ್ದರು. ಆದರೆ ಅವರು ಮಾಡಿದ ಮನಿಕೆ ಹಾಡು ಏಕಾಏಕಿ ರಾತ್ರೋರಾತ್ರಿ ವೈ’ರಲ್ ಆಗಿತ್ತು. ಕೋಟಿಗಟ್ಟಲೆ ನ್ಯೂಸ್ ಗಳನ್ನು ಪಡೆದುಕೊಂಡ ಈ ಹಾಡು ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆದಮೇಲೆ ಇನ್ಸ್ಟಗ್ರಾಂ ನಲ್ಲಿ ರೀಲ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿತ್ತು.

ಈ ಹಾಡನ್ನು ಹಾಡಿದ ಹುಡುಗಿ ಯಾರು ಎಂದು ಕೋಟ್ಯಂತರ ಜನರು ಗೂಗಲ್ ಸರ್ಚ್ ಮಾಡಿ ಹುಡುಕಿದ್ದರು. ಕೇವಲ ಗಾಯಕಿಯಾಗಿ ಅಷ್ಟೇ ಗುರುತಿಸಿಕೊಂಡಿರುವ ಈ ಹುಡುಗಿ ಗಾಯನಕಷ್ಟೇ ಸೀಮಿತವಲ್ಲ ಅದರ ಜೊತೆಗೆ ಮಾಡೆಲಿಂಗ್ ಕೂಡ ಮಾಡುತ್ತಾಳೆ. ಹಲವಾರು ಫೋಟೋಶೂಟ್ ಮಾಡಿಸಿಕೊಂಡಿರುವ ಈ ಹುಡುಗಿ, ಇತ್ತೀಚೆಗೆ ಸಿಂಹಿಳಿ ಭಾಷೆಯಷ್ಟೇ ಅಲ್ಲದೆ ತಮಿಳಿನಲ್ಲಿ ಕೂಡ ಈ ಹಾಡನ್ನು ಬಿಡುಗಡೆ ಮಾಡಿದಳು. ಅದು ಕೂಡ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ.

ಸ್ವಾಭಾವಿಕವೆಂಬಂತೆ ಒಬ್ಬ ವ್ಯಕ್ತಿ ಪ್ರಖ್ಯಾತಿಗಳಿಸುತ್ತಿದ್ದಂತೆ ಆ ವ್ಯಕ್ತಿಯನ್ನು ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಮತ್ತು ಶೋಗಳಿಗೆ ಕರೆಸುವುದು ಸರ್ವೇಸಾಮಾನ್ಯ. ಹಾಗೆಯೇ ಈ ಹುಡುಗಿ ಪ್ರತಿನಿತ್ಯ ಹಲವಾರು ಶೋಗಳನ್ನು ಅಟೆಂಡ್ ಮಾಡುತ್ತಿದ್ದಳು. ಅಂತೆಯೇ ಮೊನ್ನೆ ಕೂಡ ಒಂದು ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ಸಂದರ್ಭದಲ್ಲಿ ತನ್ನ ಗಿಟಾರ್ ಹಿಡಿಯು ತನ್ನ ಮುಖಕ್ಕೆ ಹಾಗೂ ಕಣ್ಣಿಗೆ ಬ’ಡಿದು ಈಕೆಗೆ ಗಾ’ಯವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾಳೆ ವೈ’ರಲ್ ಹುಡುಗಿ.

ಕಾರ್ಯಕ್ರಮವು ನಡೆಯಲೇಬೇಕು. ನಿನ್ನೆ ಕಾರ್ಯಕ್ರಮ ನೀಡುವಾಗ ವೇದಿಕೆಯ ಮೇಲೆಯೇ ನನಗೆ ಒಂದು ಆ’ಘಾ’ತ ಕಾದಿತ್ತು. ಹಾಡುವ ಉತ್ತುಂಗದಲ್ಲಿದ್ದಾಗ ನನ್ನ ಮುಖಕ್ಕೆ ಬಿದ್ದಿರುವ ಏ’ಟು ನನಗೆ ತಿಳಿಯಲೇ ಇಲ್ಲ. ನಮ್ಮ ಜೀವನವು ನಾವು ಹೇಗೆ ನಡೆಯುತ್ತದೆಯೋ ಅದೇ ರೂಪ ಪಡೆಯುತ್ತದೆ. ಆದರೂ ನಾವು ಹಾರುವುದನ್ನು, ಬೆಳೆಯುವುದನ್ನು ನಿಲ್ಲಿಸಬಾರದು. ನಮ್ಮ ಕಥೆಗಳು ನಮ್ಮ ಮೈಮೇಲೆ ಬಿದ್ದಿರುವ ಬ’ರೆಯಿಂದ ಹಾಗೂ ನೋ’ವೆಂಬ ಕಲೆಗಳಿಂದ ಮತ್ತಷ್ಟು ಹೊಳೆಯುತ್ತವೆ. ಮಾಡುವ ತಪ್ಪಿನಿಂದ ಯಾವಾಗಲೂ ಪಾಠವನ್ನು ಕಲಿಯಲೇ ಬೇಕಾಗುತ್ತದೆ ಎಂದು ತನ್ನ ಸೋಶಿಯಲ್ ಮೀಡಿಯಾದಲ್ಲಿ ಈ ಹುಡುಗಿ ಬರೆದುಕೊಂಡಿದ್ದಾಳೆ.

ಚಿತ್ರದಲ್ಲಿ ಹುಡುಗಿಯ ಮುಖಕ್ಕೆ ಗಾ’ಯವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕಣ್ಣಿನ ಸುತ್ತ ಕೆಂಪು ಬಣ್ಣಕ್ಕೆ ತಿರುಗಿದ್ದು ಆದರೂ ಸಹ ಹುಡುಗಿ ಪೋಸ್ ನೀಡುತ್ತಾ ತನ್ನ ಗಿಟಾರ್ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಒಟ್ಟಾರೆ ಈಕೆಗೆ ಬಂದಿರುವ ಯಶಸ್ಸು ಯಾವುದೇ ರೀತಿಯಲ್ಲಿಯೂ ಕುಂದದೆ ಮತ್ತಷ್ಟು ಉತ್ತುಂಗ ಶಿಖರಕ್ಕೆ ಏರಲಿ ಎಂಬುದೇ ನಮ್ಮ ಆಶಯ.

Leave a Reply

Your email address will not be published. Required fields are marked *