Featuredಆಧ್ಯಾತ್ಮಿಕ ಮಾಹಿತಿಉಪಯುಕ್ತ ಮಾಹಿತಿ

ತಿಮ್ಮಪ್ಪನಿಗೆ ಮುಡಿ ಸಮರ್ಪಣೆ ಯಾಕೆ ಮಾಡುತ್ತಾರೆ ಗೊತ್ತ. ಈ ಅಚ್ಚರಿ ಸಂಗತಿ ತಿಳಿದರೆ ಬೆರ’ಗಾಗ್ತೀರ.

ತಿಮ್ಮಪ್ಪನಿಗೆ ಮುಡಿ ಸಮರ್ಪಣೆ ಯಾಕೆ ಮಾಡುತ್ತಾರೆ ಗೊತ್ತ. ಈ ಅಚ್ಚರಿ ಸಂಗತಿ ತಿಳಿದರೆ ಬೆರಗಾಗ್ತೀರ. ಶ್ರೀನಿವಾಸನ ಪೂರ್ತಿ ವಿಗ್ರಹ ಸಂಪೂರ್ಣವಾಗಿ ಸ್ವಯ0 ಉದ್ಭವಮೂರ್ತಿ. ಇದನ್ನು ಯಾರೂ ಸ್ಥಾಪನೆಮಾಡಿಲ್ಲ. ಹಿಂದೆ ಶ್ರೀನಿವಾಸ ಹುತ್ತದಲ್ಲಿರುವಾಗ, ಸಾಕ್ಷಾತ್ ಬ್ರಹ್ಮ ಗೋವಿನ ರೂಪದಲ್ಲಿ ಶಿವ ಕರುವಿನ ರೂಪದಲ್ಲಿ ಬಂದು, ಹಾಲುಣಿಸುತ್ತಿರುತ್ತಾನೆ.

ರಾಜಾ ಚೋಳನ ಅರಮನೆ ಹಸುಗಳನ್ನ ನೋಡಿಕೊಳ್ಳುತ್ತಿದ್ದ ದನಗಾಹಿಗೆ ಈ ಕಾಮಧೇನು ಹೆಸರಿನ ಹಸು ಹಾಲು ಕೊಡದೇ ಇದ್ದುದೂ ಅನುಮಾನಕ್ಕೆ ಕಾರಣವಾಗಿರುತ್ತದೆ. ಒಂದು ದಿನ, ಹಸುವನ್ನೇ ಮರೆಯಿಂದ ಹಿಂಬಾಲಿಸಿಕೊಂಡು ಹೋಗುತ್ತಾನೆ. ಆಗ ಕಾಮಧೇನು, ಹುತ್ತದಲ್ಲಿದ್ದ ಶ್ರೀನಿವಾಸನಿಗೆ ಹಾಲು ಎರೆಯುತ್ತಿರುತ್ತಾಳೆ.

ಕೋಪಗೊಂಡ ದನಗಾಹಿ, ತನ್ನ ಕೊಡಲಿಯಿಂದ ಹಸುವನ್ನ ಹೊಡೆಯೋಕೆ ಮುಂದಾಗ್ತಾನೆ. ಆಗ ಆ ಏಟು ಶ್ರೀನಿವಾಸನ ತಲೆಗೆ ಬೀಳುತ್ತದೆ. ಅನಂತರ, ಶ್ರೀನಿವಾಸನ ಪರಮ ಭಕ್ತೆ ನೀಲಾದೇವಿ, ತನ್ನ ಕೂದಲನ್ನೇ ಕ’ತ್ತರಿಸಿ, ಶ್ರೀನಿವಾಸನಿಗೆ ಜೋಡಿಸುತ್ತಾಳೆ. ಆಗ ಶ್ರೀನಿವಾಸ, ನೀಲಾದೇವಿಗೆ ಒಂದು ವರ ನೀಡುತ್ತಾನೆ. ಕಲಿಯುಗದಲ್ಲಿ, ಭಕ್ತರು, ನನ್ನ ಕ್ಷೇತ್ರಕ್ಕೆ ಬಂದು ಮುಡಿ ಸಮರ್ಪಣೆ ಮಾಡಲಿ. ಅವರು ಕೊಡುವ ತಲೆ ಕೂದಲ ಮುಡಿ, ನಿನ್ನ ಮೂಲಕವೇ ನನಗೆ ಅರ್ಪಣೆಯಾಗಲಿ ಎಂದು.

ಈಗಲೂ, ಭಕ್ತರು ಕೊಡುವ ತಲೆಮುಡಿ, ನೀಲಾದೇವಿಯ ಮೂಲಕವೇ ಪರಮಾತ್ಮನಿಗೆ ಸಮರ್ಪಣೆ ಆಗುತ್ತದೆ ಎಂಬುದು ಪುರಾಣ ಐತಿಹ್ಯ. ಹೀಗೆ ನೀಲಾದೇವಿ, ಜೋಡಿಸಿದ ತಲೆಕೂದಲು ಈಗಲೂ, ಪರಮಾತ್ಮನ ಹಿಂಭಾಗದ ತಲೆಯಲ್ಲಿದೆ. ಬಲಗಡೆ ಶ್ರೀ ವೆಂಕಟೇಶ್ವರ ಸ್ವಾಮಿಯ ತಲೆಯ ಮೇಲೆ ಹೊಡೆದ ಗಾಯ ಈಗಲೂ ಇದೆ.

ಆ ಕಾರಣದಿಂದನೇ ಸ್ವಾಮಿ ತಲೆಗೆ ಗಂಧವನ್ನು ಹಚ್ಚುವ ಸಂಪ್ರದಾಯ ಕೂಡಾ ನಡೆದುಕೊಂಡು ಬಂದಿದೆ. ಇಂತಹ ಅನೇಕ ಅಚ್ಚರಿ ಸಂಗತಿಗಳು ಈ ದೇವಾಲಯದಲ್ಲಿ ಅಡಗಿದೆ. ಭಗವಂತನೆ ಒಂದು ಅಚ್ಚರಿ ಅವನಿರುವ ನಿವಾಸ ವೈಕುಂಠ ಇನ್ನೂ ಎಷ್ಟೊಂದು ಅಚ್ಚರಿಯಿಂದ ಕೂಡಿದೆ ಅಲ್ಲವೆ.

Leave a Reply

Your email address will not be published. Required fields are marked *