Featuredಸಿನಿಮಾ ಮಾಹಿತಿಸುದ್ದಿ

ದುರ್ಗಾ, ಲಕ್ಷ್ಮಿ, ಸರಸ್ವತಿಯನ್ನು ನೋಡಿ ಇವರು ಅವರೇನಾ ಎಂದು ಕೇಳಿದ ಜನತೆ. ಹಿಟ್ಲರ್ ಕಲ್ಯಾಣದ ನಟಿಯರ ಮೇಕಪ್ ಲೆಸ್ ಲುಕ್ ನೋಡಿ ದಂಗಾಗಬೇಡಿ.

ಮೇಕಪ್ ಒಂದು ಚೆನ್ನಾಗಿದ್ದರೆ ಯಾರು ಬೇಕಾದರೂ ಸೊನ್ನೆಯಿಂದ ಹೀರೋ ಆಗಬಹುದು. ಅದೇ ರೀತಿ ಅದೇ ಮೇಕಪ್ ಕೆಟ್ಟುಹೋದರೆ ಎಂಥವರು ಕೂಡ ಹೀರೋ ನಿಂದ ಜೀರೋ ಆಗಬಹುದು. ಈಗಿನ ಕಾಲದಲ್ಲಿ ಅಂಥ ವಿವಿಧ ರೀತಿಯ ಹಾಗೂ ವಿವಿಧ ಕ್ವಾಲಿಟಿಯ ಹಾಗೂ ಚಮತ್ಕಾರವನ್ನು ಮಾಡುವಂಥ ಕೇಶವಿನ್ಯಾಸದ ಹಾಗೂ ಅಲಂಕಾರದ ವಸ್ತುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.

ಸಾಮಾನ್ಯವಾಗಿ ಮೇಕಪ್ ಅವಶ್ಯಕತೆ ಇರುವುದು ನಟ-ನಟಿಯರಿಗೆ ಹಾಗೂ ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ. ಅದೇ ರೀತಿಯಲ್ಲಿ ಹೆಚ್ಚಾಗಿ ಬಳಕೆಯಾಗುವುದು ಧಾರವಾಹಿಯ ಚಿತ್ರೀಕರಣದ ಸಂದರ್ಭಗಳಲ್ಲಿ. ಧಾರವಾಹಿ ಅಂತಿದ್ದ ಹಾಗೆ ನಮಗೆ ನೆನಪಿಗೆ ಬರುವುದು, ಈಗಿನ ಕಾಲದಲ್ಲಿ ತಯಾರಾಗುತ್ತಿರುವ ಚಲನಚಿತ್ರಕ್ಕಿಂತಲೂ ಅಭೂತಪೂರ್ವವಾಗಿ ಚಿತ್ರೀಕರಣ ಮಾಡುವಂತ ಧಾರವಾಹಿಗಳು.

ಸಾಮಾನ್ಯವಾಗಿ ಬೆಳಗ್ಗಿನಿಂದ ಸಂಜೆ ತನಕ ಧಾರಾವಾಹಿಯಲ್ಲಿ ನಟಿಸುವ ನಟ-ನಟಿಯರು ಮೇಕಪ್ ಧರಿಸಲೇ ಬೇಕಾಗುತ್ತದೆ. ಏಕೆಂದರೆ ಚಿತ್ರೀಕರಣದ ಸಮಯದಲ್ಲಿ ಮೇಕಪ್ ಅವಶ್ಯಕತೆ ಇರುವುದರಿಂದ ಅವರು ಬೆಳಗಿನಿಂದ ರಾತ್ರಿಯವರೆಗೆ ಅತಿಯಾದ ಮೇಕಪ್ನಲ್ಲಿ ಇರುತ್ತಾರೆ. ಶೂಟಿಂಗ್ ಮುಗಿದ ನಂತರ ಅವರು ಅದೇ ರೀತಿಯಲ್ಲಿ ಆ ಮೆಕಪ್ಪನ್ನು ಶುಚಿ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ವಿವಿಧ ರೀತಿಯ ಚರ್ಮ ರೋ’ಗಗಳು ಬರುವ ಸಾಧ್ಯತೆ ಇರುತ್ತದೆ.

ಚರ್ಮ ರೋ’ಗಗಳ ಬರುವಿಕೆಗೆ ಮೂಲಕಾರಣ ಚಿತ್ರೀಕರಣದ ಸಮಯದಲ್ಲಿ ಬಳಸುವ ಬ್ರಷ್ ಹಾಗೂ ಒಂದೇ ರೀತಿಯ ಮೇಕಪ್ ಗಳು. ಆದರೆ ಈಗಿನ ನಟ-ನಟಿಯರು ತಮ್ಮದೇ ಆದ ಮೇಕಪ್ ಕಿಟ್ ಅನ್ನು ಶೂಟಿಂಗ್ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಾರೆ. ಹಾಗೂ ತಮ್ಮದೇ ಮೇಕಪ್ ಅನ್ನು ಬಳಸಿ ಮೇಕಪ್ ಮಾಡಿಸಿಕೊಳ್ಳುತ್ತಾರೆ. ಜೀ ಕನ್ನಡದ ಪ್ರಖ್ಯಾತ ಧಾರವಾಹಿ ಹಿಟ್ಲರ್ ಕಲ್ಯಾಣದ ಮುಖ್ಯಭೂಮಿಕೆಯಲ್ಲಿರುವ ನಟ-ನಟಿಯರು ತೆರೆಯ ಮೇಲೆ ಸೊಗಸಾಗಿ ಕಾಣಿಸುತ್ತಾರೆ. ಆದರೆ ಅವರು ತೆರೆಯ ಹಿಂದೆ ಯಾವ ರೀತಿ ಕಾಣಿಸುತ್ತಾರೆ ಎಂದು ಎಲ್ಲರಿಗೂ ಆಶ್ಚರ್ಯ ಇದ್ದೇ ಇರುತ್ತದೆ.

ಇತ್ತೀಚೆಗೆ ಹಿಟ್ಲರ್ ಕಲ್ಯಾಣದ ಮೂವರು ಖಳನಾಯಕಿ ಪಾತ್ರಧಾರಿ ಹಾಗೂ ಮುಖ್ಯ ಪಾತ್ರಧಾರಿ ಲೀಲಾ ಐಸ್ಕ್ರೀಮ್ ಪಾರ್ಲರ್ಗೆ ಹೋಗಿದ್ದರು. ಅಲ್ಲಿ ಲೀಲಾ ಅವರು ಒಂದು ಸ್ಟೋರಿಯನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸ್ಟೋರಿಯಲ್ಲಿ ಖಳನಾಯಕಿಯರಾದ ಮೂವರು ಮೇಕಪ್ ಇಲ್ಲದೆ ಗುರುತೇ ಸಿಗದಂತೆ ಕಾಣುತ್ತಿದ್ದಾರೆ. ಅವರ ಸ್ಟೋರಿಯನ್ನು ನೋಡಿದ ಜನರು ಇವರ ನಿಜವಾಗಿಯೂ ಅವರೇನಾ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ತೆರೆಯ ಮೇಲೆ ಬೆಳ್ಳಗೆ, ಪಳಪಳನೆ ಹೊಳೆಯುವ ಈ ನಟಿಯರು ತೆರೆಯ ಹಿಂದೆ ಗುರುತೇ ಸಿಗದಂತೆ ಕಾಣುತ್ತಿರುವುದು ಜನರಿಗೆ ಆಶ್ಚರ್ಯ ಹುಟ್ಟಿಸಿದೆ.

Leave a Reply

Your email address will not be published. Required fields are marked *