ಆಪ್ತಮಿತ್ರ ಚಿತ್ರದ ಹೆಸರಾಂತ ಗಾಯಕಿಯ ಮನೆಯಲ್ಲಿ ನೀರವ ಮೌನ. ಏನಾಯಿತು ನೀವೇ ನೋಡಿ.
ಬಾರಾ ಸನಿಹಕ್ಕೆ ಬಾರಾ ಎಂದು ಹಾಡುತ್ತಾ ಕನ್ನಡದಲ್ಲಿ ತನ್ನದೇ ಆದ ವಿಶಿಷ್ಟವಾದ ಛಾಪನ್ನು ಮೂಡಿಸಿದ್ದ ಪ್ರಖ್ಯಾತ ಗಾಯಕಿ’ಯ ತಂದೆ ಇಂದು ನಿಧನರಾಗಿದ್ದಾರೆ. ಹೌದು, ಕನ್ನಡ ಚಿತ್ರರಂಗದಲ್ಲಿ ತನ್ನ ವಿಶಿಷ್ಟವಾದ ಗಾಯನದ ಮೂಲಕ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದ ಖ್ಯಾತ ಗಾಯಕಿ ನಂದಿತಾ ಅವರ ತಂದೆ ಇಂದು ದೈವಾದೀನರಾಗಿದ್ದಾರೆ. ಬೆಂಗಳೂರಿನ ಆರ್.ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಅವರು ಸದ್ಯ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇನ್ಫಾರ್ಮೇಶನ್ ಟೆಕ್ನಾಲಜಿಯನ್ನೇ ತಮ್ಮ ಕೆಲಸವಾಗಿಸಿಕೊಂಡಿರುವ ನಂದಿತಾರವರು ನಂತರ ಸಂಗೀತ ಲೋಕಕ್ಕೆ ಬಂದರು. ವೀಣಾವಾದಕಿಯೂ ಆಗಿರುವ ನಂದಿತಾರವರು ಕನ್ನಡ ಚಿತ್ರರಂಗದಲ್ಲಿ 1995ರಿಂದ ತಮ್ಮ ಹಿನ್ನೆಲೆ ಗಾಯನದ ಅಲೆ ಸೃಷ್ಟಿಸಲು ಪ್ರಾರಂಭಿಸಿದರು. ಗಾನ ಗಾರುಡಿಗ ನಾದಬ್ರಹ್ಮ ಹಂಸಲೇಖ ಅವರ ಅಡಿಯಲ್ಲಿ ಹಬ್ಬ ಚಿತ್ರದ ಶೀರ್ಷಿಕೆ ಗೀತೆ ಹಬ್ಬ ಹಬ್ಬ ಹಾಡನ್ನು ಹಾಡಿದರು. ಅಷ್ಟೇ ಅಲ್ಲ ಚಿತ್ರರಂಗದ ಅತ್ಯಂತ ದಿಗ್ಗಜರಾದ ಇಳೆಯರಾಜ, ಮನೋಮೂರ್ತಿ, ಹಂಸಲೇಖ, ವಿ ಮನೋಹರ್, ರಾಜೇಶ್ ರಾಮನಾಥ್ ಮತ್ತು ಇನ್ನು ಹಲವಾರು ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಅವರ ಹಾಡುಗಳು ಇಂತಿವೆ ಇದು ಮೊದಲನೇ ಹಾಡು, ಮೂಡಲ್ ಕುಣಿಗಲ್ ಕೆರೆ, ಜೀರ್ಜಿಂಬೆ ಜೀರ್ಜಿಂಬೆ, ಆಕಾಶಕ್ಕೆ ಒಬ್ಬ ಸೂರ್ಯ ಕಣೋ, ಎದೆತುಂಬಿ ಹಾಡುವೆನು, ಬಾರಮ್ಮ ರಾಮ, ಅಕ್ಕ, ಸಿಹಿಗಾಳಿ, ಕರಿಯ ಐ ಯು, ಹೂ ಕನಸ ಜೋಕಾಲಿ, ಬಾರ ಸನಿಹಕೆ ಬಾರ ಹೀಗೆ ಹಲವಾರು.
ಬಿಳಿಬಣ್ಣದ ಗಿರಿ ಹಾಡಿಗೆ ಉತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು, ಎದೆ ತುಂಬಿ ಹಾಡಿದೆನು ಹಾಡಿಗೆ 2003ರಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ, 2004ರಲ್ಲಿ ಆಕಾಶಕ್ಕೆ ಒಬ್ಬ ಸೂರ್ಯ ಕಣೋ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಹಾಗೂ 2009ರಲ್ಲಿ ಬಾನಿಗೆ ಭಾಸ್ಕರ ಚಂದ ಹಾಡಿಗೆ ಮತ್ತೊಮ್ಮೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಮತ್ತೆರಡು ಉತ್ತಮ ಚಿತ್ರಗಳಾದ ದುನಿಯಾ ಹಾಗೂ ರಾಮ್ ಚಿತ್ರದ ಗೀತೆಗಳಾದ ಕರಿಯ ಐ ಲವ್ ಯು, ನೀನೆಂದರೆ ನನಗೆ ಇಷ್ಟ ಕಣೋ ಹಾಡುಗಳಿಗೆ 2007 ಹಾಗೂ 2009ರಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಉದಯ ಹಾಗೂ ಸುವರ್ಣ ಫಿಲಂ ಅವಾರ್ಡ್’ಗಳನ್ನು ಪಡೆದುಕೊಂಡಿದ್ದಾರೆ. 2008ರಲ್ಲಿ ಎಸ್ಎಫ್ಎಂ ಕಲಾ ಅವಾರ್ಡ್ಸ್ ಪಡೆದುಕೊಂಡಿದ್ದಾರೆ.
ಕೇವಲ ಗಾಯಕಿಯಾಗಿ ಅಷ್ಟೇ ಅಲ್ಲ ಕಂಠದಾನ ಕಲಾವಿದೆಯಾಗಿಯೂ ಕೂಡ ಪ್ಯಾರಿಸ್ ಪ್ರಣಯ, ನನ್ನ ಪ್ರೀತಿಯ ಹುಡುಗಿ ಮತ್ತು ಹಲವಾರು ಚಿತ್ರಗಳಲ್ಲಿ ನಾಯಕ ನಟಿಯರಿಗೆ ಹಿನ್ನೆಲೆ ಧ್ವನಿಯಾಗಿದ್ದಾರೆ. ಮೂಲತಹ ಚನ್ನರಾಯಪಟ್ಟಣದಲ್ಲಿ ಸುಬ್ಬರಾವ್ ಅವರ ಪುತ್ರಿಯಾಗಿ ಜನಿಸಿದ ನಂದಿತಾರವರು ಹುಟ್ಟಿದ್ದು 28 ಫೆಬ್ರವರಿ 1978 ರಲ್ಲಿ. ಚನ್ನರಾಯಪಟ್ಟಣದ ನವೋದಯ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಾಗಿ, ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳು ಹಾಗೂ ವಿಪ್ರ ವೃಂದದ ಉಪಾಧ್ಯಕ್ಷರು ಕನ್ನಡ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ನಂದಿತಾರವರ ತಂದೆ ಆಗಿರುವ ಶ್ರೀ ಸಿ ಎನ್ ಸುಬ್ಬರಾವ್ ಅವರು ಇಂದು ಬೆಳಿಗ್ಗೆ ವಯೋಸಹಜ ಖಾ’ಯಿಲೆಯಿಂದ ದೈ’ವಾದೀನರಾಗಿದ್ದಾರೆ. ದುಃ’ಖದ ಸಂಗತಿಯೇನೆಂದರೆ ಇಂದೇ ಅವರ ತಂದೆಯ ಹುಟ್ಟುಹಬ್ಬವಾಗಿತ್ತು ಹಾಗೂ ಶಿಕ್ಷಕರ ದಿನಾಚರಣೆಯೂ ಆಗಿತ್ತು.