ಆಧ್ಯಾತ್ಮಿಕ ಮಾಹಿತಿಉಪಯುಕ್ತ ಮಾಹಿತಿ

ಮಹಾಭಾರತದ ಈ ವಿಚಿತ್ರವಾದ ಸನ್ನಿವೇಶವನ್ನು ತಿಳಿದರೆ ನೀವು ಬೆರಗಾಗುತ್ತೀರ.

ನಿಮಗೆ ಓದುವ ಹವ್ಯಾಸ ಇದ್ದಾರೆ ಈ ಬರಹ ನಿಮಗೆ ಬಹಳ ಇಷ್ಟವಾಗಬಹುದು. ಓದುವ ಹವ್ಯಾಸ ಬೆಳೆಸಿಕೊಳ್ಳಿ. ಇದು ನಿಮ್ಮ ಮನಸ್ಸು ಹಾಗೂ ದೇಹವನ್ನು ಕೂಡ ಶುದ್ಧವಾಗಿಡುತ್ತದೆ. ಮಹಾಭಾರತದ ಈ ವಿಚಿತ್ರವಾದ ಸನ್ನಿವೇಶವನ್ನು ತಿಳಿದರೆ ನೀವು ಬೆರಗಾಗುತ್ತೀರ. ವಿಚಿತ್ರವಾದ ಕಥೆಯೊಂದು ಮಹಾಭಾರತದಲ್ಲಿದೆ. ಅವನ ಹೆಸರು ಯವನಾಶ್ವ. ಅವನಿಗೆ ನೂರಾರು ಮಂದಿ ರಾಣಿಯರು. ಆದರೂ ಅವನಿಗೆ ಮಕ್ಕಳಾಗಿರಲಿಲ್ಲ. ಅದರಿಂದಾಗಿ ಬೇಸರಗೊಂಡ ಆತ ಭೃಗು ಮುನಿಗಳ ಬಳಿ ಪರಿಹಾರ ಕೇಳುತ್ತಾನೆ.

ಭೃಗು ಮುನಿಗಳು ಪುತ್ರ ಕಾಮೇಷ್ಠಿ ಯಾಗ ಮಾಡುವಂತೆ ಹೇಳುತ್ತಾರೆ. ಅದಕ್ಕೊಪ್ಪಿದ ಯವನಾಶ್ವ ಯಾಗ ಮಾಡುತ್ತಾನೆ. ಭೃಗು ಮುನಿಗಳೇ ಯಾಗ ನಡೆಸಿಕೊಡುತ್ತಾರೆ. ಯಾಗದ ನಡುವೆ ಪುತ್ರಪ್ರದವಾದ ಮಂತ್ರಗಳಿಂದ ಅಭಿಮಂತ್ರಿಸಲ್ಪಟ್ಟ ನೀರನ್ನು ಭೃಗು ಮುನಿಗಳು ಕಮಂಡಲದಲ್ಲಿ ಇಟ್ಟಿರುತ್ತಾರೆ. ತುಂಬಾ ದಾಹವಾಯಿತು ಎಂದು ಆ ನೀರಿನ ಮಹತ್ವ ತಿಳಿಯದೇ ಯವನಾಶ್ವ ಅದನ್ನು ಕುಡಿದು ಬಿಡುತ್ತಾನೆ. ಕಾಲಕ್ರಮೇಣ ಅವನೇ ಒಂದು ಮಗುವಿಗೆ ಜನ್ಮ ನೀಡುತ್ತಾನೆ.

ಆ ಮಗುವಿನ ಹೆಸರು ಮಾಂಧಾತ. ಮಾಂಧಾತನಿಗೆ ಯವನಾಶ್ವ ತಾಯಿಯೂ ಹೌದು ತಂದೆಯೂ ಹೌದು. ಎರಡು ಪೂರಕವಾದ ಮತ್ತು ವಿರುದ್ಧವಾದ ಶಕ್ತಿಗಳು ಒಂದೇ ಬಿಂದುವಿನಲ್ಲಿ ಸಂಧಿಸಿದಾಗ ಏನಾಗಬಹುದು. ಬೀಜ ಮತ್ತು ಭೂಮಿ ಒಂದಾದ ಅಪೂರ್ವ ಸಂಗಮದ ಫಲ ಅದು. ತಂದೆಯೂ ಅವನೇ ತಾಯಿಯು ಅವನೇ. ಮತಾಂಧ ಅವನನ್ನು ಏನಂತ ಕರೆಯಬೇಕು. ಅಮ್ಮ ಅಂದರೂ ತಪ್ಪಿಲ್ಲ ಅಪ್ಪ ಅಂದರೂ ತಪ್ಪಿಲ್ಲ. ಯವನಾಶ್ವ ಹೇಳುತ್ತಾನೆ.

ನಾನು ಗಂಡಸ ಗೊತ್ತಿಲ್ಲ. ನನಗೆ ಖಚಿತವಿಲ್ಲ. ಗಂಡಸಿನ ಹಾಗೆ ನನ್ನ ದೇಹದ ಆಚೆ ನಾನು ಜೀವವೊಂದನ್ನು ಸೃಷ್ಟಿಸಿದ್ದೇನೆ. ಅದೇ ಹೊತ್ತಿಗೆ ಆಜೀವ ಹೆಣ್ಣಿನಲ್ಲಿ ಆಗುವಂತೆ ನನ್ನೊಳಗೆ ಸೃಷ್ಟಿಯಾಗುತ್ತಿದೆ. ಹಾಗಿದ್ದರೆ ನಾನು ಏನಾದ ಹಾಗಾಯಿತು. ಇದು ಯವನಾಶ್ವನ ಪ್ರಶ್ನೆ. ಇದು ಬಂಧನವು ಅಥವಾ ಬಿಡುಗಡೆಯು ನನಗೆ ಅರಿಯಲು ಆಗುತ್ತಿಲ್ಲ ಅನ್ನುತ್ತಾನೆ ಅವನು. ಈ ಮಧ್ಯೆ ಅವನ ತಾತ್ವಿಕ ಪ್ರಶ್ನೆ, ರಾಜ ತಾಂತ್ರಿಕ ಪ್ರಶ್ನೆಯೂ ಬರುತ್ತದೆ. ಮಕ್ಕಳಿಲ್ಲದವನು ರಾಜನಾಗುವಂತಿಲ್ಲ.

ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಹೌದು. ಇದು ನಿಯಮ. ಹಾಗಾಗಿ ಪಟ್ಟವನ್ನು ಏರುವುದಕ್ಕೆ ಅವನಿಗೆ ಮಗ ಬೇಕೇ ಬೇಕು. ಯವನಾಶ್ವ ನಿಗೆ ಕೊನೆಗೂ ಮಗ ಹುಟ್ಟುತ್ತಾನೆ. ಆದರೆ ಯವನಾಶ್ವ ತಂದೆಯಾದನೋ ತಾಯಿಯಾದಳೊ. ತಾಯಿ ಆದರೆ ಅವಳು ಪಟ್ಟಕ್ಕೆ ಏರುವಂತಿಲ್ಲ. ಹೆಣ್ಣಿಗೆ ಪಟ್ಟದ ಹಕ್ಕಿಲ್ಲ. ತಂದೆಯಾದರೆ ಮಗುವನ್ನು ಹೊತ್ತು ಹೆತ್ತದ್ದು ಹೇಗೆ. ಹೆಣ್ಣು ಗಂಡಿನ ಸಂಬಂಧ, ಪರಸ್ಪರ ಇಬ್ಬರೂ ಒಂದೇ ಆಗುವ ಪವಾಡ.

ಇಬ್ಬರೂ ಒಬ್ಬರೇ ಆಗಬೇಕಾದ ಅನಿವಾರ್ಯತೆ. ಹೊರಗೆ ಸೃಷ್ಟಿಸುವುದು ಮತ್ತು ಒಳಗೆ ಸೃಷ್ಟಿಸುವುದಕ್ಕೆ ಇರುವ ವ್ಯತ್ಯಾಸ. ಇವನ್ನೆಲ್ಲ ಈ ಕಥೆ ಎಷ್ಟು ಸೊಗಸಾಗಿ ಹೇಳುತ್ತದೆ ನೋಡಿ. ಇಲ್ಲಿ ಮೇಲು-ಕೀಳಿನ ಪ್ರಶ್ನೆ ಇಲ್ಲ. ಯಾರು ಸಹ ಹೆಚ್ಚಲ್ಲ. ಹಾಗೆ ಯಾರು ಸಹ ಕಡಿಮೆಯಲ್ಲ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

Leave a Reply

Your email address will not be published. Required fields are marked *