ಪುರಾಣ ಮತ್ತು ಮಹಾಭಾರತದ ಕಥೆಗಳಿಗೂ ಹಾಗೂ ಜನಪದ ಕಥೆಗಳಿಗೂ ಒಂದು ವೈಶಿಷ್ಟ್ಯವಿದೆ.
ಪುರಾಣ ಮತ್ತು ಮಹಾಭಾರತದ ಕಥೆಗಳಿಗೂ ಹಾಗೂ ಜನಪದ ಕಥೆಗಳಿಗೂ ಒಂದು ವೈಶಿಷ್ಟ್ಯವಿದೆ. ಆ ಕಥೆಗಳನ್ನು ಹೇಳುವುದಕ್ಕೂ ಕೇಳುವುದಕ್ಕೂ ಒಂದು ಮುಗ್ಧತೆ ಬೇಕು. ಅಂತಹ ಮುಗ್ಧತೆ ಇಲ್ಲದೆ ಹೋದರೆ ಆ ಕಥೆಗಳನ್ನು ಹೇಳುವುದಕ್ಕೆ ಸಾಧ್ಯವೇ ಇಲ್ಲ. ಉದಾಹರಣೆಗೆ ಅಶ್ವತ್ಥಾಮ ಹೇಗೆ ಹುಟ್ಟಿದ್ದ ಅನ್ನುವುದನ್ನು ವಿವರಿಸಿದರೆ ವಿಜ್ಞಾನ ಓದುತ್ತಿರುವ ಮಗ ಅದೆಲ್ಲ ಸಾಧ್ಯವೇ ಇಲ್ಲ ಅನ್ನುತ್ತಾನೆ. ಶಕುನಿ ಒಬ್ಬನೇ ಊಟ ಮಾಡುತ್ತಾ, 100 ಮಂದಿ ಸೋದರರು ಕೊಳೆತು ಸತ್ತ ನೆಲಮಾಳಿಗೆಯಲ್ಲಿ ಬದುಕುತ್ತಿದ್ದರು ಅಂದರೆ ಒಪ್ಪುವುದಿಲ್ಲ.
ಇತ್ತೀಚೆಗೆ ಕರ್ಣನ ಕಥೆಯನ್ನು ಕರ್ಣ ಸಾಂಗತ್ಯ ಹೆಸರಿನಲ್ಲಿ ನಾಟಕ ಮಾಡಿ ತೋರಿಸಿದಾಗಲೂ ಕೆಲವರು ಅದು ಅತಿಯಾಯಿತು ಎಂದು ಹೇಳಿದರು. ಮತ್ತೆ ಕೆಲವರು ಇನ್ನೂ ಹೇಳಬೇಕಾಗಿತ್ತು ಎಂದು ಮಾತನಾಡಿದರು. ಹಾಗೆಯೇ ಭೀಷ್ಮನ ಕಥೆ ಹೇಳಲು ಹೋದರೆ ಮತ್ತೊಂದಿಷ್ಟು ಸಂಕಟಗಳು ಎದುರಾಗುತ್ತವೆ. ತಾನು ಎಲ್ಲದರಿಂದ ದೂರ ಉಳಿಯುತ್ತೇನೆ ಎಂದು ನಿರ್ಧಾರ ಮಾಡಿದ ಭೀಷ್ಮ ಹಾಗೆ ನಿರ್ಧಾರ ಮಾಡದೆಯೂ ದೂರ ಉಳಿದ ವೇದವ್ಯಾಸ.
ಇವರಿಬ್ಬರ ಪೈಕಿ ಯಾತನೆ ಅನುಭವಿಸಿದ್ದು ಯುದ್ಧಕ್ಕೆ ಇಳಿದದ್ದು ಭೀಷ್ಮನೇ. ಸಾರಿ ನಿಷ್ಕಾಮಕರ್ಮಕ್ಕೆ ಭೀಷ್ಮನಿಗೆ ಇಂಥ ಒಳ್ಳೆಯ ಉದಾಹರಣೆ ಬೇಕಿಲ್ಲ. ನನಗೇನು ಬೇಡ ರಾಜ್ಯ ಬೇಡ, ಮದುವೆ ಬೇಡ ಎಂಬ ಭೀಷ್ಮ ರಾಜ್ಯಕ್ಕಾಗಿ ಮೊಮ್ಮಕ್ಕಳಿಗಾಗಿ ಕಾದಾಡಿದ. ಕೊನೆಯ ತನಕವೂ ಅವಮಾನ ಎದುರಿಸಿದ. ಕೌರವರ ದ್ರೋಹಕ್ಕೆ ಸಾಕ್ಷಿಯಾದ. ಪಾಂಡವರಿಗಾಗಿ ಪರಿತಪಿಸಿದ.
ಇಚ್ಛಾಮರಣ ಅನ್ನುವುದು ವರವೋ ಶಾಪವೋ ಗೊತ್ತಿಲ್ಲದೆ ಅನ್ನದ ಋಣದ ಮಾತಾಡಿದ. ಅತ್ಯಂತ ಧೀಮಂತ ನಾಗಿದ್ದವನು ಕ್ರಮೇಣ ತನ್ನ ಚಿಕ್ಕಮ್ಮನ ಅಧಿಕಾರದ ದಾಹದ ಸುಳಿಗೆ ಸಿಕ್ಕಿ ಬಿದ್ದ. ಭೀಷ್ಮನ ಪಾತ್ರದ ಔನ್ನತ್ಯ ಮತ್ತು ಸತ್ಯವತಿ ಪಾತ್ರದ ತೀವ್ರತೆ ಎರಡು ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಸತ್ಯವತಿಯ ಜೀವನದ ದಾರಿಯನ್ನು ಗಮನಿಸುತ್ತಾ ಬನ್ನಿ. ಬೆಸ್ತನ ಮಗಳಾಗಿದ್ದವಳು ಕ್ರಮೇಣ ಹಸ್ತಿನಾಪುರದ ಒಡತಿಯಾಗಿ ಇಡೀ ಹಸ್ತಿನಾಪುರವನ್ನು ನಿಭಾಯಿಸುವಂತೆ ಆಗಿದ್ದು ಒಂದು ಕಥೆ.
ಆ ಅಧಿಕಾರವೇ ಅವಳನ್ನು ನಿರಂತರವಾಗಿ ದುಃಖಕ್ಕೆ ಈಡು ಮಾಡುತ್ತಾ ಹೋದದ್ದು ಮತ್ತೊಂದು ವ್ಯಥೆ. ಈ ಕಥೆಯನ್ನು ಸರಳವಾಗಿ ಹೇಳಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ಇರುವುದು ಮತ್ತೆ ಮುಗ್ಧತೆಯಲ್ಲಿ. ಒಂದು ಕಾಲದಲ್ಲಿ ಭಾರತ-ಭಾರತಿ ಪುಸ್ತಕ ಸಂಪದ ಬರುತ್ತಿತ್ತು. ಅಲ್ಲಿ ಕಥೆಗಳನ್ನು ಸರಳವಾಗಿ ಹೇಳುತ್ತಿದ್ದರು.
ಈಗ ಟಿವಿ ಇಂಟರ್ನೆಟ್ ಬಂದ ನಂತರ ಗೂಗಲ್ ಮುಗ್ಧತೆಯನ್ನು ಕೊಂದುಹಾಕಿ ತನಗೆ ಗೊತ್ತಿರುವ ಸತ್ಯವನ್ನು ಹೇಳುತ್ತದೆ. ಆದರೆ ಸತ್ಯವೆಂದು ಅಂದುಕೊಂಡದ್ದು ಸುಳ್ಳಾಗಿರಬಹುದು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.