Featuredಆಧ್ಯಾತ್ಮಿಕ ಮಾಹಿತಿಉಪಯುಕ್ತ ಮಾಹಿತಿ

ತಾಂಬೂಲದಲ್ಲಿ ಜಂಟಿ ಬಾಳೆಹಣ್ಣು ಇರಬಾರದು ಏಕೆ. ತಪ್ಪದೇ ಓದಿ ನೋಡಿ.

ನಮಸ್ಕಾರ ಪ್ರಿಯ ಮಿತ್ರರೇ. ತಾಂಬೂಲದಲ್ಲಿ ಜಂಟಿ ಬಾಳೆಹಣ್ಣು ಇರಬಾರದು ಎಂದು ನಮ್ಮ ಹಿರಿಯರು ಏಷ್ಟೋ ಸಲ ಹೇಳಿರುವುದನ್ನು ನಾವು ನೀವು ಎಲ್ಲರೂ ಕೇಳಿರುತ್ತೇವೆ. ಆದರೆ ಅದಕ್ಕೆ ಕಾರಣವೇನು ಎಂದು ಎಂದಾದರೂ ಯೋಚಿಸಿದ್ದೀರಾ. ಹೀಗೆ ಮಾಡಿದರೆ ಏನಾಗುತ್ತದೆ. ಯಾಕೆ ಜಂಟಿ ಬಾಳೆಹಣ್ಣು ಇಡಬಾರದು. ಅದಕ್ಕೆ ಕಾರಣ ಇಲ್ಲಿದೆ ನೋಡಿ. ತಿಳಿಯಲು ಇದನ್ನು ಪೂರ್ತಿ ಓದಿ.

ಅವಳಿ ಬಾಳೆಹಣ್ಣಿನಲ್ಲಿ ಎರಡು ಹಣ್ಣು ಇದ್ದರೂ ಅದು ಒಂದು ಹಣ್ಣಿನ ಲೆಕ್ಕದಲ್ಲೇ ಬರುತ್ತದೆ. ತಾಂಬೂಲದಲ್ಲಿ ಒಂದೇ ಒಂದು ಹಣ್ಣು ಇಡುವಂತಿಲ್ಲವಲ್ಲ. ಹಾಗಾಗಿ ತಾಂಬೂಲದಲ್ಲಿ ಈ ರೀತಿಯ ಜಂಟಿ ಬಾಳೆಹಣ್ಣು ಇಟ್ಟರೆ ಅದು ಒಂದು ಎಂಬ ಲೆಕ್ಕ ಹಾಗಾಗಿ ತಾಂಬೂಲದಲ್ಲಿ ಅವಳಿ ಬಾಳೆಹಣ್ಣು ಕೊಡಬಾರದು.

ಇಷ್ಟಕ್ಕೂ ಜಂಟಿ ಬಾಳೆಹಣ್ಣನ್ನು ಮಕ್ಕಳಿಗೆ ಇಡುವ ಸಂಗತಿ ಪಕ್ಕಕ್ಕಿಟ್ಟರೆ, ಈ ರೀತಿಯ ಅವಳಿ ಬಾಳೆಹಣ್ಣು ದೇವರಿಗೆ ಇಡಬಾರದೇ. ಈ ಪ್ರಶ್ನೆಗೆ ಪಂಡಿತರು ಈ ರೀತಿ ಉತ್ತರ ಕೊಡುತ್ತಾರೆ. ಬಾಳೆಗಿಡ ಎಂದರೆ ಬೇರೆ ಯಾರೋ ಅಲ್ಲ. ಸಾಕ್ಷಾತ್ ದೇವ ನರ್ತಕಿ ರಂಭೆಯ ಅವತಾರ. ಶ್ರೀ ಮಹಾವಿಷ್ಣುವಿನ ಬಳಿ ರಂಭೆ ತಾನೇ ಸೌಂದರ್ಯವತಿ ಎಂದು ಅಹಂಕಾರದಿಂದ ನಡೆದುಕೊಂಡ ಕಾರಣ ಆಕೆಗೆ ಭೂಲೋಕದಲ್ಲಿ ಬಾಳೆಗಿಡವಾಗಿ ಜನಿಸೆಂದು ಮಹಾವಿಷ್ಣು ಶಪಿಸಿದ.

ಆದರೆ ಆಕೆ ತನ್ನ ತಪ್ಪು ತಿಳಿದುಕೊಂಡು ಬೇಡಿಕೊಂಡ ಕಾರಣ ದೇವರಿಗೆ ನೈವೇದ್ಯವಾಗಿ ಇಡುವ ಅರ್ಹತೆಯನ್ನು ವಿಷ್ಣು ಪ್ರಸಾದಿಸಿದ. ಅಷ್ಟು ಪವಿತ್ರವಾದ ಹಣ್ಣಿನಲ್ಲಿ ನಾವು ದೋಷಗಳನ್ನು ಹುಡುಕಬೇಕಾದ ಅಗತ್ಯವಿಲ್ಲ. ಅವಳಿ ಬಾಳೆಹಣ್ಣನ್ನು ಯಾವುದೇ ಅಭ್ಯಂತರವಿಲ್ಲದೆ ದೇವರಿಗೆ ಅರ್ಪಿಸಬಹುದು. ಆದರೆ ತಾಂಬೂಲದಲ್ಲಿ ಮಾತ್ರ ಜಂಟಿ ಬಾಳೆಹಣ್ಣು ಇಡಬಾರದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

Leave a Reply

Your email address will not be published. Required fields are marked *